ವಿಧಾನಪರಿಷತ್ ಚುನಾವಣೆ: ಉಡುಪಿ ಜಿಲ್ಲೆಯ ಮತದಾನ ಕೇಂದ್ರಗಳ ವಿವರ

Click Here

Call us

Call us

Call us

 ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂದಿಸಿದಂತೆ, ಭಾರತ ಚುನಾವಣಾ ಆಯೋಗವು ಮತದಾನ ಕೇಂದ್ರಗಳ ಪಟ್ಟಿಯನ್ನು ಅನುಮೋದಿಸಿದ್ದು, ಉಡುಪಿ ಜಿಲ್ಲೆಗೆ ಸಂಬಂಧಿಸಿದ ನೈರುತ್ಯ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಕೇಂದ್ರಗಳ ವಿವರವು ಈ ಕೆಳಗಿನಂತಿದೆ.

Call us

Click Here

ಕುಂದಾಪುರ ತಾಲೂಕಿಗೆ ಸಂಬಂಧಿಸಿದಂತೆ ಮತದಾನ ಕೇಂದ್ರ ಸಂಖ್ಯೆ 68 ರ ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜು (ಪೂರ್ವ ಭಾಗ), 69 ರ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಉತ್ತರ ಭಾಗ) ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 68 ರ ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜು ( ಪಶ್ಚಿಮ ಭಾಗ) ಮತ್ತು 69 ರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು (ದಕ್ಷಿಣ ಭಾಗ) ಇಲ್ಲಿ ಮತದಾನ ನಡೆಯಲಿದೆ.

 ಬೈಂದೂರು ತಾಲೂಕಿಗೆ ಸಂಬಂಧಿಸಿದಂತೆ ನೈರುತ್ಯ ಪದವೀಧರರರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 67 ರ ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು (ಮಧ್ಯಭಾಗ) ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು (ಉತ್ತರ ಭಾಗ) ಇಲ್ಲಿ ಮತದಾನ ನಡೆಯಲಿದೆ.

 ಬ್ರಹ್ಮಾವರ ತಾಲೂಕಿಗೆ ಸಂಬಂಧಿಸಿದಂತೆ ನೈರುತ್ಯ ಪದವೀಧರರರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 70 ರ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-1, 70(ಎ) ಯ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-2, 70 (ಬಿ) ಯ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ -3 ರಲ್ಲಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 70 ರ ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜು (ಪಶ್ಚಿಮ ಭಾಗ),

ಉಡುಪಿ ತಾಲೂಕಿಗೆ ಸಂಬಂಧಿಸಿದಂತೆ ಮತದಾನ ಕೇಂದ್ರ 71 ರ ಮಣಿಪಾಲ ಜ್ಯೂನಿಯರ್ ಕಾಲೇಜಿನ (ಎಂ.ಜೆ.ಸಿ) ಕೊಠಡಿ ಸಂಖ್ಯೆ-1, 71 (ಎ) ಯ ಮಣಿಪಾಲ ಜ್ಯೂನಿಯರ್ ಕಾಲೇಜಿನ (ಎಂ.ಜೆ.ಸಿ) ಕೊಠಡಿ ಸಂಖ್ಯೆ -2, 71 (ಬಿ) ಯ ಮಣಿಪಾಲ ಜ್ಯೂನಿಯರ್ ಕಾಲೇಜಿನ (ಎಂ.ಜೆ.ಸಿ) ಕೊಠಡಿ ಸಂಖ್ಯೆ-3, 72 ರ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್‌ನ ಕೊಠಡಿ ಸಂಖ್ಯೆ-1, 72 (ಎ) ಯ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್‌ನ ಕೊಠಡಿ ಸಂಖ್ಯೆ-2, 72 (ಬಿ) ಯ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್‌ನ ಕೊಠಡಿ ಸಂಖ್ಯೆ-3 ಮತ್ತು 72 (ಸಿ) ಯ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್‌ನ ಕೊಠಡಿ ಸಂಖ್ಯೆ -4 ರಲ್ಲಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ 71 ರ ಮಣಿಪಾಲ ಜ್ಯೂನಿಯರ್ ಕಾಲೇಜಿನ (ಪಶ್ಚಿಮ ಭಾಗ) ಮತ್ತು 72 ರ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಬೋರ್ಡ್ ಹೈಸ್ಕೂಲ್ ಅನ್ನು ಮತದಾನ ಕೇಂದ್ರಗಳಾಗಿ ಗುರುತಿಸಲಾಗಿರುತ್ತದೆ.

Click here

Click here

Click here

Call us

Call us

  ಕಾಪು ತಾಲೂಕಿಗೆ ಸಂಬಂಧಿಸಿದಂತೆ ನೈರುತ್ಯ ಪದವೀಧರರರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 73 ರ ಕಾಪುವಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ-1 ಮತ್ತು 73 (ಎ) ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ -3 ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 73 ರ ಕಾಪುವಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ-2 ಇಲ್ಲಿ ಮತದಾನ ನಡೆಯಲಿದೆ.

ಕಾರ್ಕಳ ತಾಲೂಕಿಗೆ ಸಂಬಂಧಿಸಿದಂತೆ ನೈರುತ್ಯ ಪದವೀಧರರರ ಕ್ಷೇತ್ರಕ್ಕೆ ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ), 75 ರ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-1 ಮತ್ತು 75 (ಎ) ಯ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-2 ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 74 ರ ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪೂರ್ವ ಭಾಗ) ಮತ್ತು 75 ರ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜು (ದಕ್ಷಿಣ ಭಾಗ), ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ನೈರುತ್ಯ ಪದವೀಧರರರ ಕ್ಷೇತ್ರಕ್ಕೆ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಕೇಂದ್ರ ಸಂಖ್ಯೆ 76 ರ ಹೆಬ್ರಿ ತಾಲೂಕು ಆಡಳಿತ ಸೌಧದಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply