ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ಸರಕಾರಿ ಅಸ್ಪತ್ರೆಯ ಆಡಳಿತಾಧಿಕಾರಿ ರಾಬರ್ಟ್ ರೆಬೆಲ್ಲೋ ರವರ ಮಾನಸಿಕ ಮತ್ತು ಲೈಂಗಿಕ ಕಿರುಕುಳ ಘಟನೆಯು ಈ ಆಸ್ಪತ್ರೆಗೆ ಕಪ್ಪುಚುಕ್ಕಿಯಾಗಿದ್ದು ಪ್ರಕರಣದ ಸತ್ಯತೆಯನ್ನು ಮರೆಮಾಚದೇ ಇಲಾಖಾ ವತಿಯಿಂದ ತನಿಖೆ ನಡೆಸಿ ಅವರ ಅಮಾನತಿಗೆ ಶಿಪಾರಸ್ಸು ಮಾಡಿ ಮೇಲಾಧಿಕಾರಿಗಳಿಗೆ ವಿಸ್ತ್ರತ ವರದಿಯನ್ನು ನೀಡಬೇಕೆಂದು ಕುಂದಾಪುರ ಸಾರ್ವಜನಿಕ ನಿಯೋಗ ಮನವಿ ಮಾಡಿದೆ.
ಕುಂದಾಪುರ ತಾಲೂಕು ಸರಕಾರಿ ಅಸ್ಪತ್ರೆಯು ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದ್ದು ತಾಲೂಕು ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಕೂಡ ಚಿಕಿತ್ಸೆಗಾಗಿ ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದು ಇಲ್ಲಿನ ಕುಂದಾಪುರದ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಈಶ್ವರ್ ಗಢಾದ್‌ರವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಲತಾ, ಸಹಾಯಕ ಆಡಳಿತಾಧಿಕಾರಿ ಲಿನೋರಾ ಮಸ್ಕೇರನಾಸ್ ಕಚೇರಿ ಅಧೀಕ್ಷರಾದ ಶಾಲಿ ಉಪಸ್ಥಿತರಿದ್ದರು.
ಕುಂದಾಪುರ ಸಾರ್ವಜನಿಕ ನಿಯೋಗದಲ್ಲಿ ರಾಜೇಶ್ ಕಾವೇರಿ, ಹೇರಿಕುದ್ರು ಸುನಿಲ್ ಶೆಟ್ಟಿ, ಬಲ್ಲಾಳ್ ಕಿಶೋರ್, ಪುರಸಭಾ ಸದಸ್ಯ ಪ್ರಭಾಕರ್ ಕೆ, ಟಿ ಸತೀಶ್, ಶಿವ ಮೆಂಡನ್, ಅವಿನಾಶ್ ಉಳ್ತೂರು, ಮನೋಜ್, ರಾಘವೇಂದ್ರ ಮದ್ದುಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.















