ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕ್ಕಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಕೆಸಿಇಟಿ-2024ರಲ್ಲಿ ಹೆಮ್ಮಾಡಿಯ ಜನತಾ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ. ಹಲವು ವಿದ್ಯಾರ್ಥಿಗಳು ಸಾವಿರದ ಒಳಗೆ ರ್ಯಾಂಕ್ ಗಳನ್ನು ಪಡೆದಿರುತ್ತಾರೆ.
ಪವಿತ್ರ-ಬಿ.ಎಸ್‍ಸಿ Agri,934, ಪ್ರಣವ್ ಅಡಿಗ-1523 ಇಂಜಿನಿಯರಿಂಗ್, ಕ್ಷಮಾ ಪಡಿಯಾರ್-2077 ಬಿ.ಎಸ್‍ಸಿ Agri, ಲಲನ್-2287 ಇಂಜಿನಿಯರಿಂಗ್, ರಿಷಿಕಾ ಮಾಂಟೆರಿಯೊ-2880- ಬಿ.ಎಸ್‍ಸಿ Agri,ಆದಿತ್ಯ ಚಂದನ್-4030 ಇಂಜಿನಿಯರಿಂಗ್, ಪ್ರಜ್ವಲ್ ಜಿ-4886 ಇಂಜಿನಿಯರಿಂಗ್, ಸುಬ್ರಹ್ಮಣ್ಯ-6551 ಬಿ.ಎಸ್‍ಸಿ Agri, ಐಶ್ವರ್ಯ ವೈದ್ಯ-6536 ಇಂಜಿನಿಯರಿಂಗ್, ಸನದ್ ಕುಮಾರ್ 8648 ಬಿ.ಎಸ್‍ಸಿ Agri, ರಜತ್ ಪೂಜಾರಿ-8952 ಇಂಜಿನಿಯರಿಂಗ್, ಪ್ರಜ್ವಲ್ ಎಸ್ ಪೂಜಾರಿ 9444 ಇಂಜಿನಿಯರಿಂಗ್ ರ್ಯಾಂಕ್‍ಗಳನ್ನು ಪಡೆಯುವುದರ ಮೂಲಕ ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಕಾಲೇಜು ಪ್ರಾರಂಭದ ದ್ವಿತೀಯ ವರ್ಷವೂ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.