ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
ಮೊದಲ 10 ರ‍್ಯಾಂಕ್‌ನಲ್ಲಿ ಇಬ್ಬರು, ಮೊದಲ 50ರಲ್ಲಿ ಒಂಬತ್ತು, ಮೊದಲ 100ರಲ್ಲಿ 21, ಮೊದಲ 200ರಲ್ಲಿ 48, 200ರಲ್ಲಿ 85, 400ರಲ್ಲಿ 117, 500ರಲ್ಲಿ 157, 1000ದ ಒಳಗೆ 516, 2000ದ ಒಳಗೆ 1048, 2000ದ ಒಳಗೆ 1772, 4000ದ ಒಳಗೆ 2107, 5000ದ ಒಳಗೆ 2656 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಪ್ರಮುಖವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 1000 ರ‍್ಯಾಂಕ್‌ಗಳಲ್ಲಿ 24 ವಿದ್ಯಾರ್ಥಿಗಳು, ಮೊದಲ 5000 ರ‍್ಯಾಂಕ್‌ನ ಒಳಗೆ 273 ವಿದ್ಯಾರ್ಥಿಗಳು, ಮೊದಲ 10,000 ರ‍್ಯಾಂಕ್‌ಗಳಲ್ಲಿ ಒಟ್ಟು 738 ವಿದ್ಯಾರ್ಥಿಗಳು ರ‍್ಯಾಂಕ್‌ನ್ನು ಪಡೆದಿದ್ದು, ಇವೆರೆಲ್ಲರೂ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿದ್ದಾರೆ.
ವರುಣ್ ವಿ- ಪಶು ವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಕೃಷಿಯಲ್ಲಿ 5 ರ‍್ಯಾಂಕ್, ಸಾಗರ್- ಕೃಷಿಯಲ್ಲಿ 12ನೇ ರ‍್ಯಾಂಕ್, ಪಶು ವೈದ್ಯಕೀಯ- 37ನೇ ರ‍್ಯಾಂಕ್, ಪ್ರೀತಮ್ ಎನ್ ಎಸ್- ಪಶು ವೈದ್ಯಕೀಯ-36 ನೇ ರ‍್ಯಾಂಕ್, ರಕ್ಷಿತಾ ಆರ್ ಕಾಪ್ಸೆ- ಕೃಷಿಯಲ್ಲಿ 36 ನೇ ರ‍್ಯಾಂಕ್, ಪಶು ವೈದ್ಯಕೀಯ-61 ನೇ ರ‍್ಯಾಂಕ್, ವಿನಾಯಕ್ ಡಿ ಮಾರಾಠೆ- ಕೃಷಿಯಲ್ಲಿ 46 ನೇ ರ‍್ಯಾಂಕ್, ಪಶು ವೈದ್ಯಕೀಯ-67 ನೇ ರ‍್ಯಾಂಕ್, ಸುಚಿತಾ ಸಂಜು- ಕೃಷಿಯಲ್ಲಿ 50 ನೇ ರ‍್ಯಾಂಕ್, ಪಶು ವೈದ್ಯಕೀಯ-129 ನೇ ರ‍್ಯಾಂಕ್, ವಿಕಾಸ್ ಪಾಟೀಲ್- ಕೃಷಿಯಲ್ಲಿ 66 ನೇ ರ‍್ಯಾಂಕ್, ಪ್ರೀತಮ್ ಎಂ- ಕೃಷಿಯಲ್ಲಿ 43 ನೇ ರ‍್ಯಾಂಕ್, ಪಶು ವೈದ್ಯಕೀಯ-63 ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 66ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 93ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 440ನೇ ರ‍್ಯಾಂಕ್, ಸಿಂಚನಾ ಎಸ್‌ಸಿ- ನ್ಯಾಚುರೋಪತಿಯಲ್ಲಿ 169ನೇ ರ‍್ಯಾಂಕ್, ಕೃಷಿಯಲ್ಲಿ 145ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ 191ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 191 ನೇ ರ‍್ಯಾಂಕ್, ನಮಿತ್ ಎಪಿ- ಕೃಷಿಯಲ್ಲಿ 55 ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 156ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ 274ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 274ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 498ನೇ ರ‍್ಯಾಂಕ್, ಲಕ್ಷ್ಮಿ- ಪಶು ವೈದ್ಯಕೀಯದಲ್ಲಿ 84ನೇ ರ‍್ಯಾಂಕ್ , ದೀಪಾ ರಮೇಶ್- ಕೃಷಿಯಲ್ಲಿ 82 ನೇ ರ‍್ಯಾಂಕ್, ರಜತ್- ಇಂಜಿನಿಯರಿಂಗ್‌ನಲ್ಲಿ 163ನೇ ರ‍್ಯಾಂಕ್, ದರ್ಶನ್ ಕುಮಾರ್ ಟಿ- ಕೃಷಿಯಲ್ಲಿ 82 ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 180ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ 217ನೇ ರ‍್ಯಾಂಕ್, ನರ್ಸಿಂಗ್‌ನಲ್ಲಿ 217 ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ.
ಪಿಸಿಬಿ ಹಾಗೂ ಪಿಸಿಎಮ್‌ನಲ್ಲಿ 772 ವಿದ್ಯಾರ್ಥಿಗಳು 141ರಲ್ಲಿ 100ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಪ್ರಾಂಶುಪಾಲ ಎಮ್ ಸದಾಕತ್ ಇದ್ದರು.