14ನೇ ಆವೃತ್ತಿಯ ಆಳ್ವಾಸ್ ಪ್ರಗತಿ -2024 ಸಂಪನ್ನ. ಸ್ಥಳದಲ್ಲೇ 2468 ಅಭ್ಯರ್ಥಿಗಳಿಗೆ ಉದ್ಯೋಗ!

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿ ಆವರಣದಲ್ಲಿ ನಡೆದ 2024ನೇ ಸಾಲಿನ 2 ದಿನದ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ 2468 ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ಅವಕಾಶ ನೀಡುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊAಡಿದೆ. ಈ ಬಾರಿಯ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಒಟ್ಟು 258 ಕಂಪನಿಗಳ ಪೈಕಿ 217 ಕಂಪನಿಗಳು 5953 ಜನರನ್ನು ಶಾರ್ಟ್ಲಿಸ್ಟ್ಗೊಳಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ  1542 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ 14780  ಅಭ್ಯರ್ಥಿಗಳು ಭಾಗವಹಿಸಿದರು.

Call us

Click Here

ಸರಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೂ ಆಳ್ವಾಸ್ ಪ್ರಗತಿಯಲ್ಲಿ ವಿಶೇಷ ಅವಕಾಶ
ಬೆಂಗಳೂರಿನ ಸರಕಾರಿ ಎಸ್‌ಕೆಎಸ್‌ಜೆ ಟೆಕ್ನಾಲಜಿ ಇನ್ಸಿ÷್ಟಟ್ಯೂಟ್ ಇಂಜಿನಿಯರಿAಗ್ ಕಾಲೇಜಿನ 43 ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಇಜಿ ಇಂಡಿಯಾ, ಇಸಿಯಾ ಸಾಫ್ಟ್ ಹಾಗೂ ಫ್ಲಿಪ್ ಕಾರ್ಟ್ ಕಂಪೆನಿಗಳಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಯಶಸ್ಸಿಗೆ ಆಳ್ವಾಸ್ ಬೆಂಬಲ:
ದಾವಣಗೆರೆಯ ಪದವೀಧರ ಶರಣ ಬಣಕಾರ್  ಪ್ರತಿಷ್ಠಿತ ಕಂಪನಿಯಾದ ಇನ್ಫರ್ಮ್ಯಾಟಿಕಾ ಕಂಪನಿಯಲ್ಲಿ  ವಾರ್ಷಿಕ 4.2 ಲಕ್ಷದ ವೇತನದೊಂದಿಗೆ  ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡಿದ ಅವರು,  ಇಂತಹ ಅದ್ಭುತ ಅವಕಾಶವನ್ನು ಒದಗಿಸಿದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ಸಂಸ್ಥೆಯ ಬೆಂಬಲ ಮತ್ತು ಮಾರ್ಗದರ್ಶನ ನನ್ನ ಯಶಸ್ಸಿಗೆ ಸಹಕಾರಿಯಾಗಿದೆ. ನಮ್ಮ ಬೆಳವಣಿಗೆಗೆ ಅವರ ಸಮರ್ಪಣೆ. ನಮ್ಮನ್ನು ಕಾಳಜಿ ವಹಿಸಿದ್ದಕ್ಕಾಗಿ ಪ್ರಗತಿ ತಂಡಕ್ಕೆ  ಧನ್ಯವಾದಗಳು ಎಂದರು.

ಮುಂಬೈಯ ವಿದ್ಯಾರ್ಥಿಗೂ ಆಳ್ವಾಸ್ ಪ್ರಗತಿಯಲ್ಲಿ ಉದ್ಯೋಗ!
ಮುಂಬೈನ ಠಾಕೂರ್ ಕಾಲೇಜ್ ಆಫ್ ಇಂಜಿನಿಯರಿAಗ್‌ನ ವಿದ್ಯಾರ್ಥಿ ಶೌರ್ಯ ಪೂಜಾರಿ ಮೂಲತಃ ಪಡುಬಿದ್ರಿಯವರಾಗಿದ್ದು, ಆಳ್ವಾಸ್ ಪ್ರಗತಿಯಂತಹ ಬೃಹತ್ ಉದ್ಯೋಗ ಮೇಳದ ಜನಸಾಗರವನ್ನು ವೀಕ್ಷಿಸಿ ತುಸು ಭಯಪಟ್ಟಿದ್ದರು. ಆದರೆ, ಇಲ್ಲಿನ ಸ್ವಯಂ ಸೇವಕ ವರ್ಗ ಅವರನ್ನು  ಒಳ್ಳೆಯ ರೀತಿಯಲ್ಲಿ   ಸೂಕ್ತ ಸಮಯದಲ್ಲಿ ಮಾರ್ಗದರ್ಶನ ನೀಡಿದರು. ಇಲ್ಲಿ ಎಲ್ಲವೂ ಬಹಳ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಹಲವಾರು ಕಂಪನಿಗಳಿಗೆ ಸಂದರ್ಶನ ನೀಡಿದ್ದೇನೆ , ಅದರಲ್ಲಿ ಟೊಯೋಟೋ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪೆನಿಗೆ ವಾರ್ಷಿಕ 4.7 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದೇನೆ. ಆಳ್ವಾಸ್ ಪ್ರಗತಿ ಒಂದು ಜವಾಬ್ದಾರಿಯುತ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.

ಉದ್ಯೋಗದ ಆಕಾಂಕ್ಷಿಗಳಿಗೆ ಸೂಕ್ತ ವೇದಿಕೆ
ಮಂಗಳೂರಿನ ಎಜೆಐಇಟಿಯಲ್ಲಿ ತಮ್ಮ ಬಿ.ಇ ಪದವಿ ಪಡೆದ ನಾನು ಕಳೆದ ನಾಲ್ಕು ತಿಂಗಳಿAದ ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದೆ,  ಇನ್ಸ್ಟಾಗ್ರಾಂ ರೀಲ್ ಮುಖಾಂತರ ಆಳ್ವಾಸ್ ಪ್ರಗತಿ ಬಗ್ಗೆ ತಿಳಿದು ಇಲ್ಲಿ ಉದ್ಯೋಗ ಅವಕಾಶಕ್ಕಾಗಿ ಭೇಟಿ ನೀಡಿದೆ. ಅನೇಕ ಸವಾಲನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಇಂತಹ ದೊಡ್ಡ ಉದ್ಯೋಗಾವಕಾಶವನ್ನು ಆಯೋಜಿಸಲು ಮತ್ತು ಉದ್ಯೋಗದ ಅಗತ್ಯವಿರುವ ಅನೇಕ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ನೀಡಿದ ಆಳ್ವಾಸ್ ತಂಡಕ್ಕೆ ಕೃತಜ್ಞಳಾಗಿದ್ದೇನೆ. – ತಸ್ಮಿಯಾ ಝುಲೆಕಾ ಮಂಗಳೂರು

Click here

Click here

Click here

Click Here

Call us

Call us

ಕಳೆದ ಬಾರಿ ಪ್ರಗತಿಯ ಅದ್ಭುತ  ಅನುಭವದ ಮೇರೆಗೆ ಈ ವರ್ಷವೂ ನಮ್ಮ  ಫ್ಯಾಕ್ಟ್ಸೆಟ್ ಕಂಪನಿಯ ತಂಡ ಭೇಟಿ ನೀಡಿದ್ದೇವೆ. ಇಲ್ಲಿನ ಆತಿಥ್ಯ ನಮಗೆ ಹೆಚ್ಚು ಸಂತಸವನ್ನು ನೀಡಿದೆ. ಕಳೆದ ವರ್ಷವೂ ಕೂಡ ಪ್ರಗತಿಯಿಂದ  ಹೆಚ್ಚು ವೇತನದೊಂದಿಗೆ ಹಲವಾರು ಅಭ್ಯರ್ಥಿಗಳು ಪಾಲ್ಗೊಂಡು  ಆಯ್ಕೆಯಾಗಿದ್ದಾರೆ. ಒಟ್ಟಾರೆ ಈ ಬಾರಿ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕಂಪೆನಿಗೆ ಸೇರ್ಪಡೆಯಾಗುತ್ತಾರೆ – ವೆಂಕಟ ಸತ್ಯಕೃಷ್ಣ, ಫ್ಯಾಕ್ಟ್ಸೆಟ್ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಷನ್ ಸ್ಪೆಷಲಿಸ್ಟ್

ಆಳ್ವಾಸ್ ಪ್ರಗತಿಯಂತಹ ಅದ್ಬುತ ಉದ್ಯೋಗ ಮೇಳವನ್ನು ಆಯೋಜಿಸಿ, ಕಂಪೆನಿಗಳ ಸದಸ್ಯರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುನ್ನತ ರೀತಿಯ ಅತಿಥಿ ಸತ್ಕಾರವನ್ನು ನೀಡಿ, ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ನೀಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಸಿಗುವುದು ನಿಜಕ್ಕೂ ವಿಶೇಷ. ಮುಂದಿನ ವರ್ಷದಲ್ಲಿಯೂ ಇಂತಹ ಬೃಹತ್ ಉದ್ಯೋಗ ಮೇಳದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳುತ್ತೇವೆ. – ಸತ್ಯನಾರಾಯಣ ದುರ್ಹ,  ಫ್ಯಾಕ್ಟ್ಸೆಟ್‌ನ ಅಸೋಸಿಯೇಟ್ ಆಪರೇಷನಲ್ ಮ್ಯಾನೇಜರ್

• ನಾರ್ಡಿಕ್ ಸಾಫ್ಟ್ವೇರ್‌ನ ಇಜಿ ಇಂಡಿಯಾ ಕಂಪೆನಿಯು 5.9 ಲಕ್ಷ ವಾರ್ಷಿಕ ವೇತನದೊಂದಿಗೆ ಜೂನಿಯರ್ ಸಾಫ್ಟ್ವೇರ್ ಡೆವಲಪರ್ ಹುದ್ದೆಗಳಿಗೆ 28 ಎಂಜಿನಿಯರ್‌ಗಳನ್ನು ನೇಮಿಸಿಕೊಂಡಿದೆ.

• ಫ್ಯಾಕ್ಟ್ಸೆಟ್ ಕಂಪನಿಯು 3.4 ಲಕ್ಷ ವಾರ್ಷಿಕ ಪ್ಯಾಕೇಜ್‌ನೊಂದಿಗೆ 20 ರಿಸರ್ಚ್ ಅನಾಲಿಸ್ಟ್ ಹುದ್ದೆಗೆ ಆಯ್ಕೆ ಮಾಡಿದ್ದು, 13 ಅಭ್ಯರ್ಥಿಗಳನ್ನು 7.2 ವಾರ್ಷಿಕ ವೇತನÀದೊಂದಿಗೆ ಅಡ್ವೈಸರ್ ಹುದ್ದೆಗೆ ಶಾರ್ಟ್ಲಿಸ್ಟ್ ಮಾಡಿಕೊಂಡಿದೆ. 

• ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಪ್ರೈ. ಲಿ. 4.7 ಲಕ್ಷ ವಾರ್ಷಿಕ ವೇತನದೊಂದಿಗೆ 21 ಅಭ್ಯರ್ಥಿಗಳನ್ನು ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗಳಿಗೆ ಆಯ್ಕೆ ಮಾಡಿದೆ

• ಮೈನಿ ಪ್ರೆಸಿಶನ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪೆನಿಯು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ 51 ಅಭ್ಯರ್ಥಿಗಳನ್ನು 3.2 ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.

• ಟೆನೆಕೊ ಸಂಸ್ಥೆಯು 96 ಡಿಪ್ಲೊಮಾ ಮತ್ತು ಎಂಜಿನಿಯರಿAಗ್ ಪದವೀಧರರನ್ನು ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗೆ ಆಯ್ಕೆ ಮಾಡಿದೆ.

• ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ. ಲಿ., ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗೆ 12 ಅಭ್ಯರ್ಥಿಗಳನ್ನು 4 ಲಕ್ಷ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ. 

ಇದನ್ನೂ ಓದಿ ► ಆಳ್ವಾಸ್ ಪ್ರಗತಿ 2024 – 14ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ಉದ್ಘಾಟನೆ – https://kundapraa.com/?p=72842 .

Leave a Reply

Your email address will not be published. Required fields are marked *

one + five =