ಗಂಗೊಳ್ಳಿ: ಇತ್ತೀಚೆಗೆ ಕರ್ನಾಟಕ ಸರಕಾರದ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ದ್ವಿತೀಯ ಸ್ಥಾನ ಪಡೆದರು.. ಟ್ರೋಫಿಯೊಂದಿಗೆ ವಿಜೇತ ಕ್ರೀಡಾಳುಗಳಾದ ನಾಗೇಂದ್ರ ಮೊಗವೀರ,ನಾಗರಾಜ ನಾಯಕ್ ಮತ್ತು ಪ್ರಜ್ವಲ್ ಖಾರ್ವಿ. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ.
ವರದಿ: ನರೇಂದ್ರ ಎಸ್ ಗಂಗೊಳ್ಳಿ.