ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 10 ಕೆ ಡಬ್ಲಿಯೂ ಸಾಮರ್ಥ್ಯದ ಸೋಲಾರ್ ಪವರ್ ಪ್ಲಾಂಟ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಸೋಲಾರ್ ಪವರ್ ಪ್ಲಾಂಟ್‌ನ ಉದ್ಘಾಟನೆಯನ್ನು ಕೆನರಾ ಬ್ಯಾಂಕ್ ಮಾಜಿ ನಿರ್ದೇಶಕ ಬಿ. ಸುಧಾಕರ ಶೆಟ್ಟಿ ಅವರು ನೆರವೆರಿಸಿದರು. ಕಾಲೇಜಿನಲ್ಲಿ ಹೊಸದಾಗಿ ಅಳವಡಿಸಿರುವ ಬ್ಯಾಟರಿ ರೂಮ್ ಹಾಗೂ ನವೀಕೃತಗೊಂಡಂತಹ ಸುಸಜ್ಜಿತ ಕಂಪ್ಯೂಟರ್ ಲ್ಯಾಬನ್ನು ಖಂಬದಕೋಣೆ ರೈತ ಸೇವಾ ಸಂಘದ ಅಧ್ಯಕ್ಷರಾದ ಪ್ರಕಾಶಚಂದ್ರ ಶೆಟ್ಟಿ ಹಾಗೂ ಉಪ್ಪುಂದ ಸುಮುಖ ಎಂಟರ್‌ಪ್ರೈಸಸ್ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್ ಸುರೇಶ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಕಾಲೇಜು ಅಭಿವೃಧ್ಧಿ ಸಮಿತಿ ಸದಸ್ಯರಾದ ಎಸ್ ರಾಜು ಪೂಜಾರಿ, ಕಾಲೇಜು ಅಭಿವೃಧ್ಧಿ ಸಮಿತಿ ಸದಸ್ಯರಾದ ಮಂಜುನಾಥ ಬಿಲ್ಲವ,ಐ ನಾರಾಯಣ,ನಾಗರಾಜ ಉಪ್ಪುಂದ,ಎಸ್ ಮಣಿಕಂಠ ದೇವಾಡಿಗ, ಉದ್ಯಮಿ ಹರೀಶ್ ಶ್ರಿಯಾನ್, ಪತ್ರಕರ್ತ ಅರುಣ ಕುಮಾರ್ ಶಿರೂರು, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ಐಟಿ ಸೆಲ್‌ನ ಸಂಚಾಲಕರಾದ ಡಾ. ಅಶ್ವತ್ಥ ದೇವರಾಯ ನಾಯ್ಕ, ಶಾಸಕರ ಆಪ್ತ ಸಹಾಯಕರಾದ ಶೋಧನ್ ಮಲ್ಪೆ, ಕಾಲೇಜಿನ ಎಲ್ಲಾ ಬೋಧಕರು, ಬೋಧಕೇತರರ ವರ್ಗದವರು ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.
ಕಂಪ್ಯೂಟರ್ ಲ್ಯಾಬ್ ವಿದ್ಯತ್ ಸಮಸ್ಯೆಯನ್ನು ಬೈಂದೂರಿನ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ ಶಾಸಕರು, ಸಮೃದ್ಧ ಬೈಂದೂರು ಯೋಜನೆಯ ಅಡಿಯಲ್ಲಿ ಕೆನಾರಾ ಬ್ಯಾಂಕ್ ಪ್ರಾಯೋಜಕತ್ವದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ಕಾಲೇಜಿಗೆ ಸುಮಾರು 10 ಲಕ್ಷ ರೂಪಾಯಿ ವೆಚ್ಚದ 10 KW ಸಾಮರ್ಥ್ಯದ ಸೋಲಾರ್ ಚಾಲಿತ ಆಪ್ ಗ್ರಿಡ್ ಪವರ್ ಪ್ಲಾಂಟ್ ಸಿಸ್ಟಮ್‌ಅನ್ನು ಕಾಲೇಜಿಗೆ ತರುವಲ್ಲಿ ಸಹಕರಿಸಿದ್ದಾರೆ.