ಸರಸ್ವತಿ ವಿದ್ಯಾಲಯದಲ್ಲಿ ಉಪನ್ಯಾಸಕ ದ್ವಯರ ಬೀಳ್ಕೊಡುಗೆ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ  ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾಗಿ ಒಟ್ಟಾರೆ 34 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ  ವಯೋನಿವೃತ್ತಿ ಹೊಂದಿದ ಹೆಚ್ ಭಾಸ್ಕರ ಶೆಟ್ಟಿ  ಮತ್ತು ನಿವೃತ್ತಿಯ ಬಳಿಕ ಎರಡು ವರ್ಷಗಳ ಕಾಲ  ದೈಹಿಕ ಶಿಕ್ಷಣ ಉಪನ್ಯಾಸಕರಾಗಿ  ವಿಶೇಷ ಸೇವೆಯನ್ನು ಸಲ್ಲಿಸಿದ ನಾಗರಾಜ ಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭವು ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಿತು.

Call us

Click Here

ಜಿಎಸ್‌ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಜಿಎಸ್​​ವಿಎಸ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್. ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳ ಸಂಚಾಲಕ ಎನ್. ಸದಾಶಿವ ನಾಯಕ್,  ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್., ಗಂಗೊಳ್ಳಿ  ನಿವೃತ್ತ ಉಪನ್ಯಾಸಕರನ್ನು  ಅಭಿನಂದಿಸಿ ಮಾತನಾಡಿದರು.

ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ, ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕಿ ಲವೀನ ಸಾವಿಯಾ ಸಿಕ್ವೇರಾ ಉಪಸ್ಥಿತರಿದ್ದರು.

 ಹಿಂದಿ ಭಾಷಾ  ಉಪನ್ಯಾಸಕರಾದ ನಾರಾಯಣ ನಾಯ್ಕ್ ನಿವೃತ್ತರ ಸಾಧನೆಗಳನ್ನು ಪರಿಚಯಿಸಿದರು.  ಈ ಸಂದರ್ಭದಲ್ಲಿ  ಭಾಸ್ಕರ್ ಶೆಟ್ಟಿ ಮತ್ತು ಶೋಭಾ ರಾಣಿ ದಂಪತಿ ಹಾಗೂ  ನಾಗರಾಜ ಶೆಟ್ಟಿ ಇವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಹೈಸ್ಕೂಲ್ ವಿಭಾಗದ ಕಚೇರಿ ಮುಖ್ಯಸ್ಥರಾದ ಶ್ರೀಧರ್ ಗಾಣಿಗ ಪ್ರಸ್ತಾವಿಕ ಮಾತುಗಳನ್ನಾಡಿ  ಸ್ವಾಗತಿಸಿದರು.  ಕಚೇರಿ ಪ್ರಬಂಧಕರಾದ ಪ್ರಮೋದ ಪೈ ಎಮ್. ಜಿ ಧನ್ಯವಾದ ಅರ್ಪಿಸಿದರು. ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು  ಆಂಗ್ಲ ಭಾಷೆ ಉಪನ್ಯಾಸಕಿ ಸುಪ್ರೀತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply