ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜೂ.22: ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ಆಧರಿಸಿ ಕಳ್ಳನೋರ್ವ ಸೆರೆಯಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳ್ಳಿಕಟ್ಟೆ ಎಂಬಲ್ಲಿ ನಡೆದಿದೆ.
ಹೊಸಾಡು ಶಾಖೆಯ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಿಕಿಯ ಸರಳು ಮುರಿದು ಕಳ್ಳತನ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ 10 ನಿಮಿಷದಲ್ಲೇ ಕಳ್ಳನ ಹೆಡೆಮುರಿ ಕಟ್ಟಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 1.47 ಕ್ಕೆ ಮುಳ್ಳಿಕಟ್ಟೆಯಲ್ಲಿರುವ ಸಹಕಾರಿ ಸಂಘ ಕಿಟಕಿಯ ಗ್ರಿಲ್ ಒಡೆದು ಕಳ್ಳ ಒಳನುಗ್ಗಿದ್ದಾನೆ. ಕುಂದಾಪುರ ಅಂಕದಕಟ್ಟೆಯಲ್ಲಿರುವ ಸೈನ್ ಇನ್ ಸೆಕ್ಯುರಿಟಿಯ ಸಿಸಿಟಿವಿ ಲೈವ್ ಮಾನಿಟರಿಂಗ್‌ನಲ್ಲಿ ಘಟನೆ ಬೆಳಕಿಗೆ ಬಂದು ಬೀಟ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. 10 ನಿಮಿಷದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಕಳ್ಳನನ್ನು ಹಿಡಿದರು. ಕಳ್ಳ ಕೇರಳದಿಂದ ಬಂದವನು ಎನ್ನಲಾಗಿದೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಕುರಿತು ತನಿಖೆ ನಡೆಯುತ್ತಿದೆ.
ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಸೈನ್ ಇನ್ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಕಳ್ಳನನ್ನು ತಕ್ಷಣ ಸೆರೆ ಹಿಡಿಯಲು ಸಾಧ್ಯವಾಗಿದೆ.