ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮಾಸೆಬೈಲು: ಎಸ್.ಎಸ್. ಎಲ್.ಸಿ.ಯು ವಿದ್ಯಾರ್ಥಿಗಳ ಜೀವನದಲ್ಲಿ ಮೈಲಿಗಲ್ಲು, ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಗಲ್ಲು, ಅಂತಹ ಅಡಿಗಲ್ಲು ಹಾಕಿ ಕೊಟ್ಟ ಶಾಲೆಯನ್ನು ಎಂದೂ ಮರೆಯಬಾರದು ಎಂದು ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹೆಂಗವಳ್ಳಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ನವೀನ್ ಚಂದ್ರ ಹೆಗ್ಡೆ ಹೆಂಗವಳ್ಳಿಯವರು ಅಭಿಪ್ರಾಯಪಟ್ಟರು.
ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ದ್ವಿತೀಯ ಬ್ಯಾಚ್ ಎಸ್. ಎಸ್.ಎಲ್.ಸಿ.ಯ ವಿದ್ಯಾರ್ಥಿಗಳ ಪ್ರಶಂಸಾ ಸಭೆಯ ಮುಖ್ಯ ಅತಿಥಿಯಾಗಿ ಉತ್ತಮ ಅಂಕಗಳಿಸಿದಂತೆ ಸಮಾಜದಲ್ಲಿ ಮೌಲ್ಯಯುತ ಜೀವನವನ್ನು ಮಾಡಬೇಕು. ನಿಮ್ಮನ್ನು ಅನುಸರಿಸುವವರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು.
ಅತಿಥಿಯಾದ ಶಿವಾನಂದ ಆಚಾರ್ಯ ರವರು ಮಾತನಾಡುತ್ತಾ ಮಕ್ಕಳು ಉತ್ತಮ ರೀತಿಯಲ್ಲಿ ತಯಾರಿಯನ್ನು ನಡೆಸಿ ಉತ್ತಮ ಅಂಕಗಳನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯರು ವಹಿಸಿ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಯೊಂದಿಗೆ ಶಿಕ್ಷಕರ ಮತ್ತು ಪೋಷಕರ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್. ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಎಲ್ಲರ ಪ್ರೀತಿಗೆ ಪಾತ್ರರಾದ ವಿದ್ಯಾರ್ಥಿಗಳು ಹಾಗೂ ತರಗತಿಗೆ ಪಾಠ ಮಾಡಿರುವ ಎಲ್ಲಾ ಶಿಕ್ಷಕರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಸಂಚಾಲಕರಾದ ಶಶಿಧರ್ ದೇವಾಡಿಗ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಷ್ಮಾ ಉಳ್ಳೂರು, ಕಾರ್ಯದರ್ಶಿ ಸುರೇಂದ್ರ ಕಾಮತ್, ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಸುಯೋಗ್ ಹೆಗ್ಡೆ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಧಿಕಾ ರಾವ್, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಅಮಿತಾ ಮೇಡಂ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಸೌಮ್ಯ ಮೇಡಂ, ಶಾಲಾ ಸಂಸತ್ತಿನ ಉಪನಾಯಕಿ ಸುಕನ್ಯಾ ಕಾಮತ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನಸ್ವಿ ರಾವ್ ಹಾಗೂ ಶ್ರಾವ್ಯ ಉಳ್ಳೂರು ಮತ್ತು ಪೋಷಕರಾದ ಸುಷ್ಮಾ ಉಳ್ಳೂರು ಹಾಗೂ ನಳಿನಿ ಎಂ ರಾವ್ ರವರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಶಿಕ್ಷಕಿ ರಾಧಿಕಾ ರಾವ್ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಸುಕನ್ಯಾ ಕಾಮತ್ ಹಾಗೂ ಲಹರಿ ಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ಅಮಿತಾ ವಂದಿಸಿದರು, ಶಿಕ್ಷಕಿ ನಳಿನಿ ಎಂ. ರಾವ್ ಕಾರ್ಯಕ್ರಮ ನಿರೂಪಿದರು.