ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶಾಲಾ ಸಂಸತ್ ಚುನಾವಣೆ ನಡೆಯಿತು.
ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಇಬ್ಬರು ಮತ್ತು ಉಪನಾಯಕನ ಆಯ್ಕೆಗೆ ಇಬ್ಬರು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರೆ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಏಳು ವಿದ್ಯಾರ್ಥಿಗಳು ಮತ್ತು ಉಪನಾಯಕನ ಆಯ್ಕೆಗೆ ಒಂಬತ್ತು ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಮತ ಚಲಾಯಿಸಿದರು. ಮತದಾನ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಸಲಾಯಿತು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕನಾಗಿ ೧೦ನೇ ತರಗತಿಯ ರಿತೇಶ ಮೊಗವೀರ ಮತ್ತು ಉಪನಾಯಕನಾಗಿ ಜೊಯಲ್ ಫೆರ್ನಾಂಡಿಸ್ ಆಯ್ಕೆಯಾದರು. ಹಿರಿಯ ಪ್ರಾಥಮಿಕ ವಿಭಾಗದಿಂದ ಅನನ್ಯ ವಿದ್ಯಾರ್ಥಿ ನಾಯಕಿಯಾಗಿ ಮತ್ತು ಅಹೀಶ್ ಎಂ.ಕೆ. ಉಪನಾಯಕನಾಗಿ ಆಯ್ಕೆಯಾದರು.
ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯಶಿಕ್ಷಕಿ ಸುಜಾತ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟ ನೇತೃತ್ವದಲ್ಲಿ ಶಿಕ್ಷಕರಾದ ದಿವ್ಯಶ್ರೀ ಆಚಾರ್ಯ, ಉಷಾ ಖಾರ್ವಿ, ರೇಷ್ಮಾ ನಾಯಕ್, ಲಕ್ಷ್ಮೀ, ಶ್ರೀಪತಿ ಭಟ್, ಸೂರಜ್ ಸಾರಂಗ್, ಸ್ವಾತಿ ಆಚಾರ್ಯ ಮತ್ತು ಪಲ್ಲವಿ ಖಾರ್ವಿ ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.