ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋ ಕಳ್ಳತನ ಹಾಗೂ ಗೋ ಕಳ್ಳತನಕ್ಕೆ ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ದಸ್ತಗಿರಿ ಮಾಡಿದ್ದಾರೆ.
ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ಕಳವಿಗೆ ಯತ್ನ:
ಕಮಲಶಿಲೆ ದೇವಸ್ಥಾನ ದಲ್ಲಿ ಜೂ. 15ರ ತಡರಾತ್ರಿ ಗೋ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ ಗೋಳಿಯಂಗಡಿ ಸಮೀಪ ಬಂಧಿಸಿದ್ದಾರೆ.
ಮಂಗಳೂರು ಬಜ್ಜೆಯ ವಾಜೀದ್ ಜೆ. (26) ಹಾಗೂ ಫೈಜಲ್ (40) ಬಂಧಿತರು. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಮೊಹಮ್ಮದ್ ಶರೋಝ್ ಎಂಬಾತನ ಪತ್ತೆಗೆ ಬಲೆ ಬೀಸಲಾಗಿದೆ.ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಿರೂರು ರಸ್ತೆ ಬದಿಯ ಗೋವುಗಳನ್ನು ಕದ್ದೊಯ್ದಿದ್ದ ಕಳ್ಳರ ಬಂಧನ:
ಶಿರೂರು ಪೇಟೆಯ ಮಂಜುನಾಥ ಹೊಟೇಲ್ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿ ನಿವಾಸಿಗಳಾದ ಅಬ್ದುಲ್ ಸಮಾದ್ (27 ) ಹಾಗೂ ಅಬ್ದುಲ್ ರೆಹಮಾನ್ (25) ಎಂಬಾತನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಹಾಲಾಡಿ ರಸ್ತೆಯ ಕೊಟೇಶ್ವರ ಸನ್ ರೈಸ್ ಫ್ಯಾಕ್ಟರಿ ಬಳಿ ವಶಕ್ಕೆ ಪಡೆದು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹೇಂದ್ರ XUV 500 ಕಾರು ಮತ್ತು Eco Sport Ford ಕಾರು (ಅಂದಾಜು ಮೌಲ್ಯ ಒಟ್ಟು 9,00,000/-) ಹಾಗೂ 1+ Nord2 ಕಂಪೆನಿಯ ಮೊಬೈಲ್ -1, ಅಂದಾಜು ಮೌಲ್ಯ ರೂ 4,000/- ಮತ್ತು OPPO ಕಂಪೆನಿಯ ಮೊಬೈಲ್ -1, ಅಂದಾಜು ಮೌಲ್ಯ ರೂ 5000/- ನೇದನ್ನು ಕೃತ್ಯಕ್ಕೆ ಬಳಸಿದ ಚೂರಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.