ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವಶಾಂತಿ ಲಯನ್ಸ್ ಕ್ಲಬ್ ಹುಣಸೆಮಕ್ಕಿ – ಮೊಳಹಳ್ಳಿ ಇದರ ಪದಗ್ರಹಣ ಸಮಾರಂಭವು ಹೊಂಬಾಡಿಯ ಕುಲಾಲ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಉಪ ಗವರ್ನರ್ ಸಪ್ನಾ ಸುರೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪದಗ್ರಹಣ ಸಮಾರಂಭವನ್ನು ನೆರವೇರಿಸಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಜಿಲ್ಲಾ ಅಂಬಾಸಡರ್ ಅರುಣ್ ಹೆಗ್ಡೆ ಯವರ ಉಪಸ್ಥಿತಿಯಲ್ಲಿ, ನಿಕಟ ಪೂರ್ವ ಅಧ್ಯಕ್ಷರಾದ ರತ್ನಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಜಿಲ್ಲೆ 317C ಇದರ ಪ್ರಾಂತ್ಯ ಅಧ್ಯಕ್ಷರಾದ ಸೋಮನಾಥ ಹೆಗ್ಡೆ ಹಾಗೂ ವಲಯ ಅಧ್ಯಕ್ಷರಾದ ವಸಂತ್ ಕುಮಾರ್ ಶೆಟ್ಟಿ, ಪ್ರಾಂತ್ಯ ಕಾರ್ಯದರ್ಶಿ ಆನಂದ ಶೆಟ್ಟಿ, ವಲಯ ಕಾರ್ಯದರ್ಶಿ ಪಟ್ಟಾಭಿರಾಮ ಭಟ್ ಮೊದಲಾದವರು ಭಾಗವಹಿಸಿದ್ದರು.
ಪ್ರಸ್ತುತ ಸಾಲಿನ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಶೆಟ್ಟಿ ನಿಡ್ಲಾಡಿ, ಕಾರ್ಯದರ್ಶಿಯಾಗಿ ಉದಯಕುಮಾರ್ ಶೆಟ್ಟಿ ಹಾಗೂ ಖಜಾಂಜಿಯಾಗಿ ದಯಾನಂದ್ ಪದಗ್ರಹಿತರಾದರು. ಕ್ಲಬ್ ನ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಶಂಕರ್ ಹೆಗ್ಡೆಯವರು ಅಧಿಕಾರ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ವೆಯಲ್ಲಿ ವೈದ್ಯಾಧಿಕಾರಿಗಳಾದ ಮತ್ತು” ವೈದ್ಯ ಶ್ರೇಷ್ಠ ” ಪ್ರಶಸ್ತಿ ಭಾಜನರಾದ ಡಾ. ರಾಜೇಶ್ವರಿ ಇವರನ್ನು ಸತ್ಕರಿಸಿ ಗೌರವಿಸಲಾಯಿತು. ಉಡುಪಿಯ ಜ್ಞಾನ ಸುಧಾ ಕಾಲೇಜಿನ ವಿದ್ಯಾರ್ಥಿನಿ ರೋಶಿನಿ ಎಂ ಪಿ ಇವಳು ಪಿಯು ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯದಲ್ಲಿ 6ನೇ ಸ್ಥಾನ ಗಳಿಕೆಗಾಗಿ ಆಕೆಯನ್ನು ಸತ್ಕಾರಿಸಲಾಯಿತು.
ಸರಕಾರಿ ಪದವಿಪೂರ್ವ ಕಾಲೇಜು, ಬಿದ್ಕಲ್ ಕಟ್ಟೆಯ ಪ್ರೌಢಶಾಲಾ ವಿಭಾಗದ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿ ರಾಜ್ಯದಲ್ಲಿ 7ನೇ ಸ್ಥಾನಗಳಿಕೆಗಾಗಿ ಧನುಶ್ರೀ ಇವಳನ್ನು ಗೌರವಿಸಲಾಯಿತು.
ಲಯನ್ಸ್ ನ ಹಿರಿಯ ಸದಸ್ಯರಾದ ಲ. ಸುಬ್ಬಣ್ಣ ಶೆಟ್ಟಿ ಇವರು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರೀತೇಶ್ ಹಾಗೂ ಪ್ರತಿಕ್ಷ ವಿದ್ಯಾಭ್ಯಾಸದಲ್ಲಿ ತೋರಿದ ವಿಶೇಷ ಸಾಧನೆಗಾಗಿ ಸಹಾಯಧನವಿತ್ತು ಗೌರವಿಸಿದರು. ನೂತನ ಅಧ್ಯಕ್ಷರಾದ ಲ. ಮೋಹನ್ ದಾಸ್ ಶೆಟ್ಟಿ ಇವರು ಸಂಕಷ್ಟಗಳಿಂದ ಅನಿತಾ ಹಾಗೂ ವಸಂತಿ ಇವರಿಗೆ ಸಹಾಯಧನವಿತ್ತು ಸಂತೈಸಿದರು.
ಹಿರಿಯ ಸದಸ್ಯರಾದ ಯು. ರತ್ನಾಕರ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಕೆ. ಎನ್. ಚಂದ್ರಶೇಖರ್ ಶೆಟ್ಟಿ, ಶಂಭುಶಂಕರ್ ಶೆಟ್ಟಿ, ಕ್ಯಾಬಿನೆಟ್ ಸದಸ್ಯರಾದ ದಿನಪಾಲ ಶೆಟ್ಟಿ, ಪ್ರಭಾಕರ ಶೆಟ್ಟಿ, ಅನಿಲ್ ಕುಮಾರ ಶೆಟ್ಟಿ, ರಾಜೀವ ಶೆಟ್ಟಿ, ಚಂದ್ರ ಕುಲಾಲ್, ಸುರೇಂದ್ರ ಶೆಟ್ಟಿ, ಪ್ರಶಾಂತ್ ಇಂಜಿನಿಯರ್, ಸರಸ್ವತಿ ಡಿ. ಶೆಟ್ಟಿ, ಶಶಿಕಲಾ ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.