ಬೈಂದೂರು: ಕಳೆದ 18ವರ್ಷಗಳಿಂದ ಬೈಂದೂರು ಬಿಎಸ್‌ಎನ್‌ಎಲ್ ಕಛೇರಿಯಲ್ಲಿ ಹಿರಿಯ ಟೆಲಿಕಾಂ ಕಛೇರಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ತೆರೆಸಾ ಪೌಲೂಸ್ ಅವರನ್ನು ಕಛೇರಿಯ ಸಿಬ್ಬಂಧಿಗಳು ಬೀಳ್ಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ದೂರವಾಣಿ ಸಬ್‌ಡಿವಿಜನ್ ಇಂಜೀನಿಯರ್ ಭಾಸ್ಕರ್ ಭಟ್ ವಹಿಸಿದ್ದರು. ಕುಂದಾಪುರ ವಿಭಾಗೀಯ ಇಂಜಿನಿಯರ್ ಉಪ್ಪುಂದ ಸತ್ಯನಾರಾಯಣ ಪುರಾಣಿಕ್ ನಿವೃತ್ತರಿಗೆ ಬಿಎಸ್‌ಎನ್‌ಎಲ್ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಸ್ಮರಿಸಿ ಶುಭಕೋರಿದರು. ಈ ಸಂದರ್ಭ ಸಿನೀಯರ್ ಸುಪರ್‌ವೈಸರ್ ಮೋಹನ ಹೆಬ್ಬಾರ್, ಅಯ್ಯಪ್ಪನ್, ಹಿರಿಯ ಮೆಕಾನಿಕ್‌ಗಳಾದ ರಾಮ ಮೊಗವೀರ, ಪಿ. ಭಾಸ್ಕರ, ಬಿ. ನಾಗಪ್ಪ, ಗಂಗಾಧರ, ಕುಪ್ಪಯ್ಯ, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಕೋರಿದರು.