ಉಡುಪಿ: ಬಿ, ಸಿ ದರ್ಜೆಯ 42 ದೇವಾಲಯಗಳಿಗೆ ವ್ಯವಸ್ಥಾಪನ ಸಮಿತಿ ರಚನೆಗೆ ತೀರ್ಮಾನ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜಿಲ್ಲಾ ಧಾರ್ಮಿಕ ಪರಿಷತ್‌ನ ಪ್ರಥಮ ಸಭೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜರುಗಿತು.

Call us

Click Here

ಜಿಲ್ಲೆಯ ಪ್ರವರ್ಗ ಬಿ ಮತ್ತು ಪ್ರವರ್ಗ ಸಿ ದರ್ಜೆಯ ದೇವಸ್ಥಾನಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಮತ್ತು ಈ ದೇವಸ್ಥಾನವು ಹಿಂ.ದಾ.ದ ಇಲಾಖೆಗೆ ಸೇರಿದೆ ಎಂಬ ಸ್ಪಷ್ಟ ಉಲ್ಲೇಖ ಮಾಡುವುದು, ಪ್ರವರ್ಗ ಬಿ ಯ 4 ದೇವಾಲಯಗಳು ಮತ್ತು ಪ್ರವರ್ಗ ಸಿ  ಯ 38 ಸೇರಿದಂತೆ ಒಟ್ಟು 42 ದೇವಾಲಯಗಳಿಗೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ಅನುಮೋದನೆ ಪಡೆಯಲಾಯಿತು.ಈ ಬಾರಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿಗಳನ್ನು ಸ್ವೀಕರಿಸಿ  ಆಯ್ಕೆ ಪ್ರಕ್ರಿಯೆ ನಡೆಸುವ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಕುಮಾರ ಶೆಟ್ಟಿ, ಧಾರ್ಮಿಕ ಪರಿಷತ್‌ ಸದಸ್ಯರಾದ ವೆಂಕಟೇಶ ಅಡಿಗ ಉಳ್ತೂರು, ರಾಜೇಶ ನಡ್ಯತಿಲ್ಲಾಯ, ಶಶಿಧರ ಶೆಟ್ಟಿ, ನಾಗಪ್ಪ ಕೊಠಾರಿ, ಶ್ರೀನಿವಾಸ ಹೆಬ್ಬಾರ್, ಪದ್ಮನಾಭ ಬಂಗೇರ, ಸದಾನಂದ ಹೇರೂರು, ಆಶಾ ಚಂದ್ರಶೇಖರ್ ಭಾಗವಹಿಸಿದ್ದರು.

Leave a Reply