ರೋಟರಿ ಕ್ಲಬ್ ಬೈಂದೂರು ವತಿಯಿಂದ ವನಮಹೋತ್ಸವ ಆಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪರಿಸರ ಉಳಿದರೆ ನಮ್ಮೆಲ್ಲರ ಉಳಿವು ಸಾಧ್ಯವಿದೆ. ಸಮೃದ್ಧ ಪರಿಸರವೆಂಬುದು ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ‌ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಹೇಳಿದರು.

Call us

Click Here

ಅವರು ರೋಟರಿ ಕ್ಲಬ್ ಬೈಂದೂರು ವತಿಯಿಂದ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ರೋಟರಿ ವನದಲ್ಲಿ ಶುಕ್ರವಾರ ವನಮಹೋತ್ಸವ – 2024 ಕಾರ್ಯಕ್ರಮದಲ್ಲಿ ಗೀಡ ನೆಟ್ಟು ಮಾತನಾಡಿದರು.

ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಮೋಹನ್ ರೇವಣ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಹಾಯಕ ಗವರ್ನರ್ ಸೋಮನಾಥ ಆರ್, ಐ.‌ ನಾರಾಯಣ್, ಮಂಜುನಾಥ್ ಮಹಾಲೆ, ಗೋವಿಂದ ಎಂ, ಮಣಿಕಂಠ ದೇವಾಡಿಗ ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯದರ್ಶಿ ಸುನಿಲ್ ಹೆಚ್. ಜಿ. ಕಾರ್ಯಕ್ರಮ ನಿರೂಪಿಸಿದರು.

ರೋಟರಿ ವನದಲ್ಲಿ 50 ಗಿಡಗಳನ್ನು ನೆಟ್ಟು ಗಿಡಗಳ ಪೋಷಣೆಗೆ ಪ್ರತಿಜ್ಞೆ ಕೈಗೊಳ್ಳಲಾಯಿತು.

Leave a Reply