ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮಿಡೀಯಂ ಸ್ಕೂಲ್‍ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ಗಡಿಭದ್ರತಾ ಪಡೆಯಲಿ ಸೈನಿಕರಾಗಿ ಸೇವೆಸಲ್ಲಿಸಿದ ನಿವ್ರತ್ತ ಸೈನಿಕರಾದ ಗಣಪತಿ ಖಾರ್ವಿ ಅವರು ಹುತಾತ್ಮ ಯೋಧರಿಗೆ ಪುಷ್ಪ ನಮನವನ್ನು ಸಲ್ಲಿಸಿ, ಕಾರ್ಗಿಲ್
ಯುದ್ಧದ ನೇರ ಅನುಭವವನ್ನು ಹಂಚಿಕೊಂಡು ಒಂದು ವ್ಯವಸ್ಥೆಯ ಮುಖಂಡ ಸಮರ್ಥನಾಗಿದ್ದಾರೆ ಜಯ ಖಂಡಿತ ಸಿಗುವುದು. ಸೈನಿಕರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಾಗಿರುತ್ತಾರೆ ಎನ್ನುತ್ತಾ, ವಿದ್ಯಾರ್ಥಿಗಳಿಗೆ ಮಾತ್ರಭೂಮಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸೇನೆಗೆ ಸೇರಿ ಎಂದು ಎಳೆಯ ಮನಸ್ಸುಗಳನ್ನು ಹುರಿದುಂಬಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಜನತಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಗಣೇಶ ಮೊಗವೀರ ಅವರು ಮಾತನಾಡಿ ದೇಶದ ಪ್ರಗತಿಯಲ್ಲಿ ಶಿಕ್ಷಣ, ರೈತರು ಹಾಗೂ ಯೋಧರು ಬಹಳ ಮುಖ್ಯ ಪಾತ್ರವಹಿಸುತ್ತಾರೆ ಈ ದಿಶೆಯಲ್ಲಿ ಮಕ್ಕಳಿಗೆ ಈ ಮೂರು ಪ್ರಮುಖ ವಿಚಾರಗಳ ಕುರಿತು ಗಮನವಹಿಸುವಂತೆ ಎಂದರು.
ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ವಿದ್ಯಾರ್ಥಿಗಳು ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಸಹ ಶಿಕ್ಷಕಿಯಾದ ದಿವ್ಯ ಸುವರ್ಣ ಸ್ವಾಗತಿಸಿ, ಸ್ವಪ್ನ ಪೂಜಾರಿ ನಿರೂಪಿಸಿ, ಶರಧಿ ಹೆಬ್ಬಾರ್ ವಂದಿಸಿದರು.