ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರದ ಹವ್ಯಾಸಿ ಚಿತ್ರ ಕಲಾವಿದೆ ಸುಪ್ರಸನ್ನ ನಕ್ಕತ್ತಾಯರವರ ಸಂಚಯ – ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇತ್ತೀಚಿಗೆ ಉದ್ಘಾಟನೆಗೊಂಡಿತ್ತು.
ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಜರುಗಿದ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನ ಚಿತ್ರ ಕಲಾವಿದ ಮತ್ತು ಪರಿಸರ ತಜ್ಞ ದಿನೇಶ್ ಹೊಳ್ಳ ಉದ್ಘಾಟಿಸಿದ್ದರು.
ಈ ವೇಳೆ ಅತಿಥಿಗಳಾಗಿ ಕುಂದಪ್ರಭ ಪತ್ರಿಕೆಯ ಸಂಪಾದಕ ಯು. ಎಸ್. ಶೆಣೈ , ಕುಂದಾಪುರದ ಶಿಕ್ಷಣ ತಜ್ಞೆ ಚಿತ್ರಾ ಕಾರಂತ್, ಕಲಾವಿದ ಮತ್ತು ತ್ರಿವರ್ಣ ಕಲಾ ಕ್ಲಾಸಸ್‌ನ ಮಾರ್ಗದರ್ಶಕ ಹರೀಶ್ ಸಾಗಾ ಉಪಸ್ಥಿತರಿದ್ದರು.
ಅಕ್ರಾಲಿಕ್ ವರ್ಣದಲ್ಲಿ ಕ್ಯಾನ್ವಾಸ್ ಮೇಲೆ ಪರಿಸರದ ಪ್ರಾಣಿ ಪಕ್ಷಿಗಳ ಬೆಸುಗೆಯ ರೇಖೆ, ನೈಜ್ಯ ಚಿತ್ರಣ, ಮಧುಬನಿ ಮತ್ತು ಗೋಂಡ್ ಶೈಲಿಯಲ್ಲಿ ರೂಪುಗೊಂಡ 100ಕ್ಕೂ ಅಧಿಕ ಕಲಾಕೃತಿಗಳಲ್ಲಿ ಮೂಡಿ ಬಂದಿದೆ. ಎರಡು ದಿನಗಳ ಕಾಲ ನಡೆದ ಚಿತ್ರ ಕಲಾ ಪ್ರದರ್ಶನದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, 25 ಕಲಾಕೃತಿಗಳು ಮಾರಾಟಗೊಂಡವು.