ಕಾರ್ಗಿಲ್ ಯುದ್ಧ ವಿಜಯೋತ್ಸವದ ಬೆಳ್ಳಿಹಬ್ಬ ಸಮಾರಂಭದ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ವೃತ್ತಿ, ಮನೆ, ಮನಸ್ಸು ಹಲವು ವ್ಯತ್ಯಾಸಗಳ ಕಾರಣಗಳಿಂದ ಸಮಾಜದಲ್ಲಿ ನಮ್ಮೊಳಗೆ ಪರಸ್ಪರ ಯುದ್ಧಗಳು ನಡೆಯುತ್ತಿರುತ್ತವೆ. ಆದರೆ ದೇಶ ಕಾಯುವ ಸೈನಿಕರದ್ದು ಮಾತ್ರ ನೈಜವಾದ ಯುದ್ಧವಾಗಿದ್ದು, ಅವರು ತಮ್ಮ ಕುಟುಂಬವನ್ನು ತೊರೆದು ದೇಶ ರಕ್ಷಣೆಗೆ ಸಾಹಸ ಹಾಗೂ ಧೈರ್ಯದಿಂದ ಮಾಡಿದ ಹೋರಾಟದ ಫಲದಿಂದ ನಾವುಗಳು ನೆಮ್ಮದಿಯಿಂದ ಬದುಕಲು ಸಹಕಾರಿಯಾಗಿದೆ. ಸೈನಿಕರ ರಕ್ತಕ್ಕೆ ಬೆಲೆ ಕಟ್ಟಲಾಗದು ಎನ್ನುವುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ್ ಹೇಳಿದರು.

Call us

Click Here

ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹಾಗೂ ಬೈಂದೂರು ತಾಲೂಕು ಘಟಕದ ವತಿಯಿಂದ ನಡೆದ ಕಾರ್ಗಿಲ್ ಯುದ್ಧ ವಿಜಯೋತ್ಸವದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿದ ದೇಶವಾಗಿದ್ದು, ಇತರೇ ಯಾವ ದೇಶಗಳಿಗೂ ಹೆದರುವ ಅವಶ್ಯಕತೆಯಿಲ್ಲ. ಇದಕ್ಕೆ ಪೂರಕ ಎಂಬಂತೆ ಪ್ರಸ್ತುತ ಸನ್ನಿವೇಶದಲ್ಲಿ ವಿರೋಧಿ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸುವ ನಮ್ಮ ಸೈನಿಕರ ಅಪ್ರತಿಮ ಶೌರ್ಯ, ಸಾಹಸದಿಂದ ದೇಶ ವಿಶ್ವಗುರುವತ್ತ ಸಾಗಲಿದೆ. ಈ ನಿಟ್ಟಿನಲ್ಲಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಬೈಂದೂರು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಾನ್ ಸಿ. ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿಗೆ ಸೇನೆಯಿಂದ ನಿವೃತ್ತರಾದ ವೆಂಕಟೇಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ಅಮರ್ ಜವಾನ್ ಸ್ಮಾರಕದ ಪ್ರತಿರೂಪಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್ ಅವರು ಅಮರ್ ಜ್ಯೋತಿ ಬೆಳಗಿ ಅನಂತ ಶೌರ್ಯ ಮತ್ತು ದೇಶಪ್ರೇಮದ ಉದಾಹರಣೆಯಾದ ಕಾರ್ಗಿಲ್ ವಿಜಯ್ ದಿವಸ್‌ನ ಎಲ್ಲಾ ವೀರ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ನಂತರ ಸಾಮೂಹಿಕ ಪುಷ್ಪನಮನ ಸಲ್ಲಿಸಲಾಯಿತು. ಬೈಂದೂರು ರೋಟರಿ ವತಿಯಿಂದ ಜಾನ್ ಸಿ. ಥಾಮಸ್ ಅವರನ್ನು ಗೌರವಿಸಲಾಯಿತು.

Click here

Click here

Click here

Click Here

Call us

Call us

ಮುಖ್ಯ ಅತಿಥಿಯಾಗಿ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಶ್ಯಾನುಭಾಗ್, ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ಸಂಘದ ಜಿಲ್ಲಾಧ್ಯಕ್ಷ ಮಹಾಬಲ ಎನ್. ರೋಟರಿ ಅಧ್ಯಕ್ಷ ಮೋಹನ್ ರೇವಣ್ಕರ್ ಇದ್ದರು.

ಘಟಕದ ಕಾರ್ಯದರ್ಶಿ ಗಣಪತಿ ಎಂ. ಎಳಜಿತ್ ಪ್ರಾಸ್ತಾವಿಸಿದರು. ಮಾಜಿ ಸೈನಿಕ ಗಣಪತಿ ಖಾರ್ವಿ ಉಪ್ಪುಂದ ಸ್ವಾಗತಿಸಿದರು. ರಾಘವೇಂದ್ರ ಖಾರ್ವಿ ವಂದಿಸಿದರು. ಸುಬ್ರಹ್ಮಣ್ಯ ಜಿ. ನಿರೂಪಿಸಿದರು.

Leave a Reply