ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ “ವೀರಭೋಗ್ಯಾ ವಸುಂಧರಾ” ಎಂಬ ವಿಷಯದ ಕುರಿತು ಸ್ಪೂರ್ತಿ ಮಾತು 4ನೇ ಕಾರ್ಯಕ್ರಮ ’ಸಪ್ತಸ್ವರ’ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಕಾರ್ಕಳದ ಆದರ್ಶ ಗೋಖಲೆ ಅವರು “ವೀರಭೋಗ್ಯಾ ವಸುಂಧರಾವು ಸಾರ್ಥಕ ಜೀವನವನ್ನು ನಡೆಸಲು ಶೌರ್ಯ ಮತ್ತು ಧೈರ್ಯವು ಅಗತ್ಯ ಲಕ್ಷಣಗಳಾಗಿವೆ ಎಂದರು.
ನಂತರ ಈ ಭೂಮಿಯನ್ನು ಆಳುವ ಸಾಮರ್ಥ್ಯ ಇರುವುದು ವೀರರಿಗೆ ಮಾತ್ರ. ದೇಶದ ಸಂಸ್ಕೃತಿ, ನಾಗರಿಕತೆಯನ್ನು ಉಳಿಸಿ – ಬೆಳೆಸುವಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಯೋಧರ ತ್ಯಾಗ – ಬಲಿದಾನಗಳು ಮಹತ್ವಪೂರ್ಣತೆಯನ್ನು ಪಡೆದುಕೊಂಡಿವೆ ” ಎಂದು ತಿಳಿಸಿ, ದೇಶಪ್ರೇಮದ ಕುರಿತ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು, ಉಪನ್ಯಾಸಕ ವರ್ಗದವರು, ಬೋಧಕೇತರ ವೃಂದ, ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.















