ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು, ಜುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಒಂಕೋಲಜಿ ಮಂಗಳೂರು ಮತ್ತು ಸೋಶಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ತೌಹೀದ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ಸೋಶಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ ಇದರ ಅಧ್ಯಕ್ಷ ಅಬ್ದುಲ್ ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಾಮೀಯಾ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ತೌಹೀದ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ತಾಹೀರ್ ಹಸನ್, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಉಪಾಧ್ಯಕ್ಷ ಅಯೂಬ್ ಬೆದ್ರೆ, ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಶುಭಾಂಕರ ಮತ್ತು ಡಾ. ಪ್ರವೀಣಾ ಜಿ. ಉಪಸ್ಥಿತರಿದ್ದರು.
ಸೋಶಿಯಲ್ ವೆಲ್ಫೇರ್ ಫೆಡರೇಶನ್‌ನ ಮಹಮ್ಮದ್ ಜಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವನಾಜ್ ಮಾರಿ ಕಿರಾತ್ ಪಠಿಸಿದರು. ಜಫ್ರಿ ಎಂ. ಎಚ್. ವಂದಿಸಿದರು. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ನೇತ್ರ ತಪಾಸಣೆ, ದಂತ ತಪಾಸಣೆ, ಸ್ತ್ರೀ ರೋಗ ತಪಾಸಣೆ ಮೊದಲಾದ ಸೇವೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡರು.