ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 13 ವರ್ಷ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಗೀತಾ ಇವರಿಗೆ ಶಾಲಾ ಅಧ್ಯಾಪಕ ವೃಂದ. ಎಸ್ ಡಿ ಎಂ ಸಿ ಸರ್ವ ಸದಸ್ಯರು ಮಕ್ಕಳ ಪಾಲಕ ಪೋಷಕರು ಹಳೆ ವಿದ್ಯಾರ್ಥಿಗಳು ವಿದ್ಯಾಭಿಮಾನಿಗಳು ಸೇರಿಕೊಂಡು ಚಿನ್ನದ ಉಂಗುರವನ್ನು ತೊಡಿಸಿ ಅಭಿನಂದನಾ ಪತ್ರವನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಾಗರತ್ನ ಆರ್. ಸಾಲಿಮನಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂಬದಕೋಣೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಗಣೇಶ್ ದೇವಾಡಿಗ ಕಂಬದಕೋಣೆ ಗ್ರಾಮ ಪಂಚಾಯಿತಿ ಸದಸ್ಯ ಜಲಜಾಕ್ಷಿ ಗಾಣಿಗ, ಸಂಸ್ಕೃತ ಪಾಠಶಾಲಾ ಬಹುಳಾಪುರ ಇಲ್ಲಿಯ ಮುಖ್ಯ ಶಿಕ್ಷಕರಾದ ವಿದ್ವಾನ್ ತಿರುಮಲೇಶ್ವರ ಭಟ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ದೇವಾಡಿಗ, ಕೊಡುಗೈ ದಾನಿಗಳು ಉದ್ಯಮಿಗಳು ಧನುಷ್, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣ ಪೂಜಾರಿ ಹಿತ್ಲ್ ಮನೆ, ಸ್ಪೂರ್ತಿ ಜನರಲ್ ಸ್ಟೋರ್ಸ್ ನ ಮಾಲಕರಾದ ಎಚ್. ವಿಜಯಕುಮಾರ್ ಶೆಟ್ಟಿ, ಮೇಕೊಡು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಾಹಕರಾದ ಕುಶಲ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿನೇಶ್ ಪೂಜಾರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಉದಯ್ ಆಚಾರ್ಯ ಅಂಗನವಾಡಿ ಕಾರ್ಯಕರ್ತೆ ಅನುಸೂಯಾ ಮಯ್ಯ, ಮುಖ್ಯ ಶಿಕ್ಷಕರಾದ ಜಯಾನಂದ ಪಟಗಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಜಯಾನಂದ ಪಟಗಾರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಗೌರವ ಶಿಕ್ಷಕಿ ಸುನಿತಾ ವಂದನಾರ್ಪಣೆ ಮಾಡಿದರು. ಸಹಶಿಕ್ಷಕ ಚಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯಾದ ಭಾರತಿ ಕುಮಾರಿ ಅನುಷಾ ಕುಮಾರಿ ಸೌಮ್ಯ ಕಾರ್ಯಕ್ರಮಕ್ಕೆ ಸಹಕರಿಸಿದರು.