ಲಯನ್ಸ್‌ನಿಂದ ಅತಿವೃಷ್ಠಿ ಭಾದಿತ ಕುಟುಂಬಗಳಿಗೆ ಕಿಟ್ ವಿತರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಲಯನ್ಸ್ ಜಿಲ್ಲೆ ವತಿಯಿಂದ ಅತಿವೃಷ್ಠಿಯಿಂದ ನಷ್ಟ ಹೊಂದಿದ ಬಡ ಕುಟುಂಬದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮವು ಕುಂದಾಪುರ ಭಂಡಾರ್‌ಕಾರ್ಸ್‍ ಕಾಲೇಜಿನ ರಾಧಾಬಾರಮಣ ಪ್ರಭು ಸಭಾಂಗಣದಲ್ಲಿ ನಡೆಯಿತು.

Call us

Click Here

ಲಯನ್ಸ್ ಜಿಲ್ಲೆ 317ಸಿ, ವಲಯ 5 ಹಾಗೂ 6ರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಫೌಂಡೇಶನ್ ವತಿಯಿಂದ ನೀಡಲ್ಪಟ್ಟ ಆರ್ಥಿಕ ಸಹಾಯವನ್ನು, ಆಹಾರ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹಾಗೂ ಡಿಸ್ಟ್ರಿಕ್ಟ್ ಅಂಬಾಸಿಡರ್ ಅರುಣ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು.

ಲಯನ್ಸ್ ಜಿಲ್ಲೆಯ 21 ಕ್ಲಬ್‌ಗಳ ವ್ಯಾಪ್ತಿಯಲ್ಲಿರುವ 189 ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮ ವಿಶ್ವಾಸ ತುಂಬಲಾಯಿತು. ಜನರ ಸಂಕಷ್ಟದ ಸಮಯದಲ್ಲಿ ಲಯನ್ಸ್ ಅವರ ಸಹಾಯಕ್ಕೆ ಧಾವಿಸುತ್ತದೆ. ಎಂದು ಗವರ್ನರ್ ಮಹಮ್ಮದ್ ಹನೀಫ್ ಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್‌ಗಳಾದ ಲಯನ್ ವಿ. ಜಿ. ಶೆಟ್ಟಿ, ಪ್ರಥಮ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಸ್ವಪ್ನಾ ಸುರೇಶ, ದ್ವಿತೀಯ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ರಾಜೀವ ಕೋಟ್ಯಾನ್, ರಿಜನಲ್ ಚೇರ್ ಪರ್ಸನ್ ಸೋಮನಾಥ ಹೆಗ್ಡೆ, ಜಗದೀಶ ಶೆಟ್ಟಿ, ವಲಯ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ, ಡಾ| ಶಿವ ಕುಮಾರ್ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಜ್ನೇಶ ಪ್ರಭು ಸ್ವಾಗತಿಸಿದರು. ರಮಾನಂದ ಕೆ. ಕಾರ್ಯಕ್ರಮ ನಿರ್ವಹಿಸಿದರು.

Click here

Click here

Click here

Click Here

Call us

Call us

Leave a Reply