ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತಾರಾಪತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿರೂರು ಕ್ಲಸ್ಟ್‌ರ್ ಮಟ್ಟದ ಪ್ರತಿಭಾ ಕಾರಂಜಿ 2024-25 ಗುರುವಾರದಂದು ಚಂದ್ರಕಾಂತ ಕಲಾವೇದಿಕೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೈಂದೂರು ತಹಸಿಲ್ದಾರ ಪ್ರದೀಪ್ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆ ಹೊರಬರುವ ಒಂದು ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತಿ ಅಂಚಿನಲ್ಲಿರುವ ಆನಂದ್ ಗಾಣಿಗ ಹಾಗೂ ಶಾಲೆಯಿಂದ ವರ್ಗಾವಣೆ ಹೊಂದಿ ಶಿರೂರು ಸಮೂಹ ಸಂಪನ್ಮೂಲ ಹುದ್ದೆಗೆ ಆಯ್ಕೆಗೊಂಡ ಗಣೇಶ್ ಪೂಜಾರಿ ಅವರನ್ನು ಎಸ್‍ಡಿಎಮ್‍ಸಿ , ಹಳೆವಿದ್ಯಾರ್ಥಿಸಂಘ, ಶಿಕ್ಷಕರರು ಹಾಗೂ ಊರ ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಉದ್ಯಮಿ ಕೇಶವ ಪೂಜಾರಿ, ಸದಾಶಿವ ಡಿ. ಎಸ್‍ಡಿಎಮ್‍ಸಿ ಅಧ್ಯಕ್ಷ ಕೃಷ್ಣ ಖಾರ್ವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಖಾರ್ವಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ , ಕ್ಷೇತ್ರ ಸಮನ್ವಯ ಅಧಿಕಾರಿ ಪ್ರದೀಪ್, ನೋಡೆಲ್ ಅಧಿಕಾರಿ ಸತ್ಯನ ಕೊಡೇರಿ, ಗಣಪತಿ ಹೋಬಳಿದಾರ್ ಇತರರು ಉಪಸ್ಥಿತರಿದ್ದರು.
ಶಿಕ್ಷಕ ಸಂದೀಪ್ ಕಾರ್ಯಕ್ರಮ ನೀರೂಪಣೆ ಮಾಡಿದರು. ಗಣೇಶ್ ಪೂಜಾರಿ ವಂದಿಸಿದರು.