ಆಳ್ವಾಸ್ ಸಹಕಾರ ಸಂಘದ 8ನೇ ವಾರ್ಷಿಕ ಮಹಾಸಭೆ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದರೆ:
ಆಳ್ವಾಸ್ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ 3.36 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ತನ್ನ ಸದಸ್ಯರಿಗೆ ಶೇ.17 ಲಾಭಾಂಶ (ಡಿವಿಡೆಂಟ್) ಘೋಷಿಸಿದೆ.

Call us

Click Here

ಆಳ್ವಾಸ್ ಕೃಷಿಸಿರಿ ಆವರಣದಲ್ಲಿನ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಶನಿವಾರ ನಡೆದ ಸಂಘದ 2023-24 ನೇ ಸಾಲಿನ 8ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಕಟಿಸಲಾಯಿತು.

ವಾರ್ಷಿಕ ವರದಿ ವಾಚಿಸಿದ ಸಂಘದ ಕಾರ್ಯ ನಿರ್ವಹಣಾಧಿಕಾರಿ ಅರ್ಪಿತಾ ಶೆಟ್ಟಿ, ಸಂಘವು ಈ ಸಾಲಿನಲ್ಲಿ 150 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಕಳೆದ ವಿತ್ತೀಯ ವರ್ಷಕ್ಕಿಂತ ಈ ವರ್ಷ 50 ಲಕ್ಷದಷ್ಟು ಹೆಚ್ಚಿನ ಲಾಭ ಗಳಿಸಿದೆ. ಶೇ. 99.20 ಸಾಲ ವಸೂಲಾತಿ ಮಾಡಿದೆ. 2016ರ ಜುಲೈ 10 ರಂದು ಸಂಘ ಆರಂಭಗೊAಡಿದ್ದು, ಪ್ರಸ್ತುತ 3876 ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಆಳ್ವಾಸ್ ಸಹಕಾರಿ ಸಂಘದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಆಳ್ವಾಸ್ ಸಂಸ್ಥೆಯು ಖಾಸಗಿ ದೋರಣೆಯೊಂದಿಗೆ ಕೆಲಸ ನಿರ್ವಹಿಸಿದರೂ, ಸಮಾಜದ ಪರಿಕಲ್ಪನೆಯಲ್ಲಿ ಸರ್ವರ ಹಿತ ಕಾಪಾಡುತ್ತಾ ಬಂದಿದೆ. ಆಳ್ವಾಸ್‌ನ ಪ್ರತಿ ಕಾರ್ಯದಲ್ಲೂ ಸಮಾಜಮುಖಿ ಚಿಂತನೆ ಒಳಗೊಂಡಿದೆ. ಸದ್ಯ ಈ ಸಹಕಾರಿ ಸಂಘದ ಶಾಖೆಯನ್ನು ಬೇರೆಲ್ಲೂ ತೆಗೆಯುವ ಯೋಚನೆ ಹೊಂದಿಲ್ಲ, ಸರಕಾರ ನಿಗದಿಪಡಿಸಿರುವ ನಿಯಮವನ್ನು ಪಾಲನೆ ಮಾಡಿ, ವ್ಯವಹಾರವನ್ನು ವೃದ್ಧಿಸುವ ಗುರಿಯನ್ನು ಹೊಂದಿದ್ದೆವೆ. ಮುಂದಿನ ವರ್ಷಕ್ಕೆ 100 ಕೋಟಿ ಠೇವಣಿ ಸಂಗ್ರಹಿಸಿ, ಬ್ಯಾಂಕಿನ ವ್ಯವಹಾರವನ್ನು 175 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು.

ಸಂಘದ ವ್ಯವಹಾರದಲ್ಲಿ ಯಾವುದೇ ನ್ಯೂನತೆಗಳಿಲ್ಲದೆ ಈ ವರ್ಷವೂ ಸೇರಿ ಸತತ 6 ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿಯ ಸಂಘ ಎಂಬ ಗೌರವಕ್ಕೆ ಪಾತ್ರವಾಗಿದ್ದೇವೆ. ಕರ್ನಾಟಕ ಶಿಕ್ಷಣ ಇಲಾಖೆಯಿಂದ ಕರ್ನಾಟಕದ ನಂ 1 ಕನ್ನಡ ಮಾಧ್ಯಮ ಶಾಲೆ ಎಂದು ಘೋಷಿಸಲ್ಪಟ್ಟ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಶ್ರೇಯೋಭಿವೃದ್ಧಿಗೆ ಬ್ಯಾಂಕಿನ ಲಾಭಾಂಶದಲ್ಲಿ 20 ಲಕ್ಷದಷ್ಟು ಹಣವನ್ನು ನಿಯೋಗಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ ಎಂದರು.

Click here

Click here

Click here

Click Here

Call us

Call us

2023-24ನೇ ಸಾಲಿನ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ, ಪ್ರಸ್ತುತ ಆಳ್ವಾಸ್ ದತ್ತು ಸ್ವೀಕಾರ ಯೋಜನೆಯ ವಿದ್ಯಾರ್ಥಿನಿ, ಅಂಕಿತಾ ಬಸಪ್ಪಾ ಕೊಣ್ಣೂರು, ಅದೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಪಡೆದ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮುರುಗೇಶ್ ಬಿರಾದರ್ ಪಾಟೀಲ್, ಋತುರಾಜ್ ರಾಮಕೃಷ್ಣ ಚಿನಗೆ, ಆಳ್ವಾಸ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಮನೀಷಾ ಎನ್ (625ರಲ್ಲಿ 622 ಅಂಕ), ಹಾಗೂ ಮಂಗಳೂರು ವಿವಿಯ ಅಂತಿಮ ವಾಣಿಜ್ಯ ಪದವಿಯ ಆರು ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದ ಆಳ್ವಾಸ್ ಕಾಲೇಜಿನ ದೀಕ್ಷಾ ಶೆಟ್ಟಿ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ನಗದಿನೊಂದಿಗೆ ಅಭಿನಂದಿಸಲಾಯಿತು.

ಸಹಕಾರ ಶಿಕ್ಷಣ ನಿಧಿಯ 3.03 ಲಕ್ಷದ ಚೆಕ್ ಅನ್ನು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿಗೆ ಮೂಡುಬಿದಿರೆಯ ಸಹಕಾರಿ ತರಬೇತಿ ಸಂಸ್ಥೆಯ ಪುಷ್ಪರಾಜ್ ಮೊಯಿಲಿ ಮೂಲಕ ಹಸ್ತಾಂತರಿಸಲಾಯಿತು.

ನಿರ್ದೇಶಕರುಗಳಾದ ಶ್ರೀಪತಿ ಭಟ್, ನಾರಾಯಣ ಪಿಎಂ, ವಿವೇಕ್ ಆಳ್ವ, ರಾಮಚಂದ್ರ ಮಿಜಾರು, ಡಾ. ರಮೇಶ್ ಶೆಟ್ಟಿ, ಪ್ರಕಾಶಿನಿ ಹೆಗ್ಡೆ, ಅಶ್ವಿನ್ ಜೊಸ್ಸಿ ಪಿರೇರಾ, ಮೊಹಮ್ಮದ್ ಷರೀಫ್, ಡಾ ರಮೇಶ್ ಶೆಟ್ಟಿ, ಮೀನಾಕ್ಷಿ ಇದ್ದರು. ಸಂಘದ ಉಪಾಧ್ಯಕ್ಷ ಎ. ಮೋಹನ್ ಪಡಿವಾಳ್ ಸ್ವಾಗತಿಸಿದರು. ನಿರ್ದೇಶಕ ಜಯರಾಮ್ ಕೋಟ್ಯಾನ್ ವಂದಿಸಿ, ಆಳ್ವಾಸ್ ಪ. ಪೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply