ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ನೇರಪ್ರಸಾರ ಸೇವೆ ನೀಡುತ್ತಿರುವ ಲೈವ್ ಸ್ಟೀಮಿಂಗ್ ಗುಣಮಟ್ಟ, ಏಕರೂಪದ ದರ ನಿಗದಿ ಮೊದಲಾದ ವಿಚಾರಗಳ ಬಗ್ಗೆ ಅಸೋಸಿಯೇಷನ್ ರಚಿಸುವ ಸಂಬಂಧ ಗುರುವಾರ ಮೂಡಬಿದಿರೆ ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ನೇರಪ್ರಸಾರದ ಗುಣಮಟ್ಟ, ಏಕರೂಪದ ದರ ನಿಗದಿ ಹಾಗೂ ಸೌಹಾರ್ದ ವ್ಯವಹಾರ ಮಾಡುವುದು ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆದು ನೇರ ಪ್ಸಾರ ಮಾಡುತ್ತಿರುವ ಎಲ್ಲರನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಸಂಘಟನೆಯನ್ನು ಮಾಡುವ ಉದ್ದೇಶದಿಂದ ಅಸೋಸಿಯೇಷನ್ ರಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಈ ಬಗ್ಗೆ ಮುಂದಿನ ಹಂತದ ಸಭೆಯನ್ನು ಸೆಪ್ಟಂಬರ್ 17 ರಂದು ಕಾರ್ಕಳದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಈ ಸಭೆಗೆ ದ.ಕ. ಉಡುಪಿ ಹಾಗೂ ಇತರ ಕಡೆಗಳ ನೇರಪ್ರಸಾರ ಮಾಡುತ್ತಿರುವ ಸಂಸ್ಥೆಗಳನ್ನು ಸೇರಿಸಿಕೊಂಡು ಮುಂದುವರಿಯುವ ಬಗ್ಗೆಯೂ ಮಾತುಕತೆ ನಡೆಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ಸುಮಾರು 25ಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬೆಂಬಲ ಸೂಚಿಸಿದರು.