ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಪಂಚಾಯತ್‌ರಾಜ್ ಒಕ್ಕೂಟದ ವತಿಯಿಂದ ಮಂಗಳವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಮತ್ತು ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು.
ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ಭಾಗವಹಿಸಲಿ:
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡೆ ಯುವ ಕೆಡಿಪಿ ಸಭೆಗಳಿಗೆ ಅಧಿಕಾರಿ ಗಳು ಬರುತ್ತಾರೆ. ಪಂಚಾಯಿತಿ ಮಟ್ಟದಲ್ಲಿ ನಡೆ ಯುವಸಭೆಗಳಿಗೆ ಬರುತ್ತಿಲ್ಲ, ಪಂಚಾಯಿತಿ ಸ್ಥಳೀಯ ಸರಕಾರವಾಗಿದ್ದು, ಎಲ್ಲ ಅಧಿ ಕಾರಿಗಳಿಗೆ ಭಾಗವಹಿಸುವಿಕೆ ಅಗತ್ಯ ಎಂದು ಪಂಚಾಯಿತಿ ಸದಸ್ಯರು ಪ್ರತಿಪಾದಿಸಿ ದರು. ಗ್ರಾಮ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ವರ್ಗ ಭಾಗವಹಿಸುವ ನಿಯಮ ಸರಕಾರ ಜಾರಿಗೆ ತರಬೇಕಾಗು ತ್ತದೆ. ಈ ಬಗ್ಗೆ ಸಮಾಲೋಚನೆ ಅವಶ್ಯ ಎಂದು ಪಂಚಾಯತ್ ರಾಜ್ ವಿಶ್ಲೇಷಕ ಟಿ.ಬಿ.ಶೆಟ್ಟಿ ಹೇಳಿದರು.
ಕಳೆದ 2 ವರ್ಷಗಳಿಂದ ನರೇಗಾದಲ್ಲಿ ಕೈಗೊಳ್ಳುವ ಕ್ರಿಯಾಯೋಜನೆ ಜಾರಿಗೆ ವೆಂಡರ್‌ಗಳೇ ಮುಂದೆ ಬರುತ್ತಿಲ್ಲ. ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿಯುತ್ತಿದೆ ಎಂದು ಪಂಚಾಯಿತಿ ಪ್ರತಿನಿಧಿಗಳು ಆರೋಪಿಸಿದರು.
ಇದಕ್ಕೆ ಸಂಸದ ಕೋಟ ಶ್ರೀನಿವಾಸ ಅವರು ಪ್ರತಿಕ್ರಿಯಿಸಿ ನರೇಗಾ ಸಂಬಂಧಿತ ಅಧಿಕಾರಿಗಳ ಜಿಲ್ಲಾ ಮಟ್ಟದ ಸಭೆ ಕರೆದು ಚರ್ಚಿಸಲಾಗುವುದು ಎಂದರು.
15ನೇ ಹಣಕಾಸು ಅನುದಂತೆ ಯಾವುದೇ ಅನುದಾನ ಪಂಚಾಯಿತಿಗೆ ಬರುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರಕಾರ ಭಾಗ್ಯ ಕೊಡುವುದರಲ್ಲೇ ಪಡುಬಿತ ನಿರತವಾಗಿದೆ ಹೊರತು ಅಭಿವೃದ್ಧಿ ಪಂಚಾರ ಕೆಲಸಗಳ ಬಗ್ಗೆ ಗಮನಹರಿಸುತ್ತಿಲ್ಲ 2024- ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ವಿಶೇಷ ಬಿದ್ದಿದೆ ಎಂದು ಪಂಚಾಯಿತಿ ಸದಸ್ಯೆ ಗಂರಾಧಾದಾಸ್ ಆರೋಪಿಸಿದರು.
ತಾಲೂಕು ಪಂಚಾಯತ್ ರಾಜ್ ಒಕ್ಕೂ ಸಾಲಿ ಟದ ಅಧ್ಯಕ್ಷ ಅಡಕೆಕೊಡು ಉದಯ ಶೆಟ್ಟಿ ಹಿರಿಯ ಪಂಚಾಯತ್‌ರಾಜ್ ವಿಶ್ಲೇಷಕ ಎಸ್. ಜರ್ನಾದನ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟೆಹೊಳೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ನಮ್ಮ ಭೂಮಿ ಸಂಸ್ಥೆಯ ಶಿವಾನಂದ ಶೆಟ್ಟಿ ಉಪಸ್ಥಿತರಿದ್ದರು. ಶ್ರೀನಿವಾಸ ಗಾಣಿಗೆ ಕಾರ್ಯಕ್ರಮ ನಿರ್ವಹಿಸಿದರು.