ಆಳ್ವಾಸ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಸಂಗ್ರಹಿಸಿದ ವಸ್ತುಗಳನ್ನು ಕೊಡುಗೆ ನೀಡುವುದು ಅಂತಕರಣದಿಂದ ಮಾಡುವ ದಾನ. ಸಂಗ್ರಹ ಹಾಗೂ ದಾನದ ಹಿಂದಿನ ಮೌಲ್ಯ ಮಹತ್ತರ’ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

Call us

Click Here

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಗ್ರಂಥಾಲಯ ವಿಭಾಗವು ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮೆಸಪಟೋಮಿಯದಲ್ಲಿ ಮೊದಲ ಗ್ರಂಥಾಲಯ ಸ್ಥಾಪನೆಯಾಯಿತು ಎಂದು ಇತಿಹಾಸ ತಿಳಿಸಿದ ಅವರು, ದೇವಸ್ಥಾನ ಕಟ್ಟಿದರೆ ಭಿಕ್ಷುಕರು ಹೆಚ್ಚಾಗುತ್ತಾರೆ. ಆದರೆ, ಗ್ರಂಥಾಲಯ ಕಟ್ಟಿದರೆ ವಿದ್ವಾಂಸರು ಹುಟ್ಟುತ್ತಾರೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಮಾತನ್ನು ನೆನಪಿಸಿದರು.

ಪುಸ್ತಕಕ್ಕೆ ಮರಣ ಇಲ್ಲ. ಫುಸ್ತಕಗಳು ಜ್ಞಾನ ನೀಡುವ ದೇಗುಲ. ಜಾತಿ, ಧರ್ಮ ಮೀರಿದ ದೇವಾಲಯವೇ ಗ್ರಂಥಾಲಯ. ನಾಗರಿಕತೆ ಇತಿಹಾಸವೇ ಗ್ರಂಥದಲ್ಲಿವೆ.  ಓದು ವ್ಯಕ್ತಿ ಬೆಳವಣಿಗೆಗೆ ಪೂರಕ ಎಂದರು.

ದೇಶದ ಮೊದಲ ಗ್ರಂಥಾಲಯದಲ್ಲಿ ನಮ್ಮ ಸುರತ್ಕಲ್‌ನ ಮಹಿಳೆಯೊಬ್ಬರು ಸೇವೆ ಸಲ್ಲಿಸಿದ್ದರು’ಎಂದು ಸ್ಮರಿಸಿದ ಅವರು, ವಿದ್ಯಾರ್ಥಿಗಳು ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.

Click here

Click here

Click here

Click Here

Call us

Call us

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಂಥಾಲಯ ಬಹುಮುಖ್ಯ. ಜ್ಞಾನ ಪಡೆಯುವುದು ಉತ್ತಮ. ಆದರೆ, ಪುಸ್ತಕ ಹಾಳು ಮಾಡುವುದು ಹಾಗೂ ಕದಿಯುವುದು ದೊಡ್ಡ ಅಪರಾಧ. ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರಲಿ ಎಂದು ಹಿತವಚನ ಹೇಳಿದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ.ಆರ್. ನರಸಿಂಹ ಮೂರ್ತಿ, ‘ಸಾಧಕರ ಚರಿತ್ರೆ ನಮ್ಮ ಬದುಕಿಗೆ ಪ್ರೇರಣೆ ನೀಡುತ್ತದೆ’ಎಂದರು.

ಸರ್ವಪಳ್ಳಿ ರಾಧಾಕೃಷ್ಣನ್ ಆದರ್ಶ ಶಿಕ್ಷಕರು. ಅವರ ಜ್ಞಾನ, ಸಾಧನೆ ಜೊತೆ ವಿದ್ಯಾರ್ಥಿಗಳ ಪ್ರೀತಿ ಪಾತ್ರರಾಗಿದ್ದರು. ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ ಎಂದರು.

ಬದುಕಿನಲ್ಲಿ ವೃತ್ತಿಯು ಆಯ್ಕೆ ಆಕಸ್ಮಿಕ ಆಗಿರಬಹುದು. ಆದರೆ, ವೃತ್ತಿಗೆ ಬಂದ ಬಳಿಕ ಅದನ್ನು ಪ್ರೀತಿಸಬೇಕು, ಆನಂದಿಸಬೇಕು ಹಾಗೂ ನ್ಯಾಯ ನೀಡಬೇಕು ಎಂದರು.

ಗಣಿತ ಪ್ರಾಧ್ಯಾಪಕರಾದ ಎಸ್.ಆರ್. ರಂಗನಾಥನ್ ತಮ್ಮ ಆಸಕ್ತಿ ಹಾಗೂ ಅಧ್ಯಯನದಿಂದ ಭಾರತದ ಗ್ರಂಥಾಲಯ ಪಿತಾಮಹ ಆದರು ಎಂದರು.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಅದೃ?ವಂತರು. ಇಲ್ಲಿ ಪಠ್ಯದ? ಪ್ರಮುಖವಾದ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿವೆ. ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

ಸಮಯ ಪ್ರಜ್ಞೆ, ದೂರಗಾಮಿ ಚಿಂತನೆ, ಸದುದ್ದೇಶಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿಯನ್ನು ಹೊಂದಿದ ಡಾ.ಎಂ.ಮೋಹನ ಆಳ್ವ ಅವರು ನಮ್ಮ ನಡುವಿನ ಶ್ರೇಷ್ಠ ಸಾಧಕರುʼ ಎಂದು ಅವರು ಅಭಿನಂದಿಸಿದರು.

ಖಾಸಗಿ ಗ್ರಂಥಾಲಯ ಸ್ಥಾಪಿಸಿದ್ದ ಹಾಗೂ ಆಳ್ವಾಸ್ ಕಾಲೇಜಿನ ಗ್ರಂಥಾಲಯಕ್ಕೆ ಕೃತಿಗಳನ್ನು ಕೊಡುಗೆ ನೀಡಿದ ತೀರ್ಥಹಳ್ಳಿ ಶೈಲಶ್ರೀ ರಮೇಶ್ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.

ಗ್ರಂಥಾಲಯ ವಿಭಾಗವು ಹಮ್ಮಿಕೊಂಡಿದ್ದ ಕನ್ನಡ ಹಾಗೂ ಇಂಗ್ಲೀಷ್ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಗ್ರಂಥಾಲಯ ಪಿತಾಮಹ ಎಸ್. ಆರ್ ರಂಗನಾಥನ್ ಅವರನ್ನು ಸ್ಮರಿಸಿದ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಯಾ ಶೆಟ್ಟಿ ನಿರೂಪಿಸಿದರು. ಪ್ರಾಧ್ಯಾಪಕ ಹರೀಶ್ ಟಿ.ಜಿ. ವಂದಿಸಿದರು.

Leave a Reply