ಕುಂದಾಪುರ ತಾಲೂಕು ಕಚೇರಿ ಸಮಸ್ಯೆಗಳಿಗೆ ಶಾಸಕರ ಬೇಜವಾಬ್ದಾರಿ ಕೂಡ ಕಾರಣ: ಕೆ. ವಿಕಾಸ್ ಹೆಗ್ಡೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
 ತಾಲೂಕು ಕಚೇರಿ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಹೊಂದಿದ್ದು, ಇಲ್ಲಿನ ಸಮಸ್ಯೆಗಳಿಗೆ ಶಾಸಕರ ಬೇಜವಾಬ್ದಾರಿ ಕೂಡ ಕಾರಣ. ಇವತ್ತು ವಿದ್ಯುತ್ ಇಲ್ಲದಾಗ ಜನರೇಟರ್ ಬಳಸಲು ಬೇಕಾದ ಡೀಸೆಲ್ ಇಲ್ಲಾ ಎನ್ನುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕಚೇರಿ ನಿರ್ವಹಣೆಗೆ ಸರ್ಕಾರದಿಂದ ಬಂದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದನ್ನು ಸಂಬಂಧಿತರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಜನಸಾಮಾನ್ಯರನ್ನು ಹೈರಾಣ ಮಾಡುವುದು ತಾಲ್ಲೂಕು ಕಚೇರಿಯ ಹೆಚ್ಚಿನ ಸಿಬ್ಬಂದಿಗಳಿಗೆ ಅವರ ಜೀವನದ ಒಂದು ಭಾಗವಾಗಿ ಬಿಟ್ಟಿದೆ  ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಹೇಳಿದರು.

Call us

Click Here

ಅವರು ಮಾಡಿದ ತಪ್ಪಿಗೆ ಜನಸಾಮಾನ್ಯರು ದಿನನಿತ್ಯ ತಾಲೂಕು ಕಚೇರಿಗೆ ಅಲೆದಾಡುವುದು ಕುಂದಾಪುರ ತಾಲೂಕು ಕಚೇರಿಯ ದಿನನಿತ್ಯದ ವ್ಯವಸ್ಥೆ. ಶಾಸಕರುಗಳು ಈ ಬಗ್ಗೆ ಮೌನ ವಹಿಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ. ಅಧಿಕಾರಿಗಳು ಸಭೆಗಳಲ್ಲಿ ಹಾರಿಕೆಯ ಉತ್ತರ ಕೊಟ್ಟಾಗ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಗೋಜಿಗೆ ಹೆಚ್ಚಿನ ಜನಪ್ರತಿನಿದಿನಗಳು ಹೋಗದ ಕಾರಣ ಸರ್ಕಾರಿ ನೌಕರರು ಆಡಿದ್ದೇ ಆಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸೇವೆ ಮಾಡಬೇಕಾದವರು ಪ್ರಜೆಗಳನ್ನು ಅನಗತ್ಯ ಹಿಂಸಿಸುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಕುಂದಾಪುರ ತಾಲ್ಲೂಕು ಕಚೇರಿಯಲ್ಲಿ ಜನರೇಟರ್‌ಗೆ ಡೀಸೆಲ್ ಇಲ್ಲದೇ ಇರುವ ವಿಚಾರವನ್ನು ಸಂಬಂಧಿತರು ಗಂಭೀರವಾಗಿ ಪರಿಗಣಿಸಿ ಅದರ ಬಗ್ಗೆ ತನಿಖೆ ನಡೆಸಿ ತಪ್ಪು ನಡೆದಿದ್ದಲ್ಲಿ ಕ್ರಮವಾಗಬೇಕು. ಜನಸಾಮಾನ್ಯರ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ಇನ್ನಾದರೂ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದ ಶಾಸಕರುಗಳು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Leave a Reply