ಸಾಧನಾ ಶಿಕ್ಷಕ ದಿನಾಚರಣೆ: ನಿವೃತ್ತರಿಗೆ ಸನ್ಮಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಿಕ್ಷಕರು ತಮಗೆ ದೊರೆಯುವ ವೇತನದಿಂದ ತೃಪ್ತರಾಗುವವರು. ಅವರದ್ದು ನಿಜ ಅರ್ಥದಲ್ಲಿ ಸೇವೆ. ಅವರು ಮಕ್ಕಳ ಭವಿಷ್ಯವನ್ನು ರೂಪಿಸುವ ಕಾಯಕ ನಡೆಸುವುದರಿಂದ ಅವರನ್ನು ಸಮುದಾಯವು ಗೌರವ ಮತ್ತು ಆದರದಿಂದ ನೋಡಿಕೊಳ್ಳಬೇಕು ಎಂದು ಮರವಂತೆ ಸಾಧನಾ ವೇದಿಕೆಯ ಸಂಸ್ಥಾಪಕ ಎಸ್. ಜನಾರ್ದನ ಮರವಂತೆ ಹೇಳಿದರು.

Call us

Click Here

ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಸಾಧನಾ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆಯಲ್ಲಿ ಸನ್ಮಾನಿತರಾದ ನಿವೃತ್ತ ಶಿಕ್ಷಕ ನಾರಾಯಣ ಬಿ. ಮತ್ತು ಸರ್ವೋತ್ತಮ ಭಟ್ ಅವರನ್ನು ಅಭಿನಂದಿಸಿದರು. ಭಾಗವಹಿಸಿದ್ದ ಮರವಂತೆಯ ಎಲ್ಲ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಲಾಯಿತು ಮತ್ತು ಭೋಜನ ಕೂಟ ಏರ್ಪಡಿಸಲಾಗಿತ್ತು. 

ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಶಾಧಿಕಾರಿ ಚಂದ್ರ ಬಿಲ್ಲವ, ಸದಸ್ಯರು, ನಾಡ ಸತ್ಯಸಾಯಿ ಲೋಕಸೇವಾ ಗುರುಕುಲಂನ ಮುಖ್ಯಸ್ಥ ಅವಿನಾಶ್ ಉಪಸ್ಥಿತರಿದ್ದರು.

ಜತೀಂದ್ರ ಮರವಂತೆ ನಿರೂಪಿಸಿದರು. ದೇವಿದಾಸ ಶ್ಯಾನುಭಾಗ್ ಸಹಕರಿಸಿದರು. ಜಿ. ಎಸ್. ಮಡಿವಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಶೇಷಗಿರಿ ಆಚಾರ್ ವಂದಿಸಿದರು.

Leave a Reply