ಅನಧಿಕೃತವಾಗಿ ಬುಲ್ ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗಿದ ಬೋಟಿಗೆ ತಡೆಯೊಡ್ಡಿದ ನಾಡದೋಣಿ ಮೀನುಗಾರರು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾಡದೋಣಿ ಮೀನುಗಾರರು ಒಟ್ಟಾಗಿ ಬುಲ್ ಟ್ರಾಲ್ ಮೀನುಗಾರಿಕೆ ಮಾಡುತ್ತಿರುವ ಬೋಟುಗಳನ್ನು ತಡೆದು ನಿಲ್ಲಿಸಿ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದೆ.

Call us

Click Here

ಬೈಂದೂರು ವಲಯ ನಾಡದೋಣಿ ಮತ್ತು ಗಂಗೊಳ್ಳಿ ನಾಡದೋಣಿ ಮೀನುಗಾರರು ಒಂದುಗೂಡು ಸುಮಾರು ನೂರಕ್ಕೂ ಹೆಚ್ಚು ದೋಣಿಯವರು ಬುಲ್ಟ್ರೋಲ್ ಮಾಡುತ್ತಿರುವ ಬೋಟುಗಳನ್ನು ತಡೆದಿದ್ದಾರೆ. ಟ್ರಾಲ್ ಬೋಟಿಂಗ್ನಲ್ಲಿ ಸುಮಾರು 45 ಪೊಸಿಷನ್ 29 ಲಾಂಗ್‌ನಲ್ಲಿ ಬುಲ್ಟ್ರೋಲ್ ಮಾಡುತ್ತಿದ್ದು ಕಂಡುಬಂದಿದೆ. ನಾಡದೋಣಿಯುವರು ಇದನ್ನು ಪ್ರತಿಭಟಿಸಿದ್ದಾರೆ. ಸಮುದ್ರದ ತೀರಪ್ರದೇಶದಲ್ಲಿ ಬುಲ್ ಟ್ರಾಲ್ ಮಾಡುವುದರಿಂದ ಮೀನುಗಳ ಸಂತತಿ ನಾಶವಾಗುವುದರಲ್ಲಿ ಸಂಶಯವಿಲ್ಲ. ಬುಲ್‌ಟ್ರಾಲ್‌ ಲೈಟ್‌ ಫಿಶಿಂಗ್‌ನಿಂದ ನಾಡದೋಣಿ ಮೀನುಗಾರರ ಜೀವನಕ್ಕೆ ತೊಂದರೆಯಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆಗೆ ತೆರಳಿದರೆ ಬರಿಗೈಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಬಾಹಿರವಾಗಿ ಮೀನುಗಾರಿಕೆಗೆ ಮಾಡುತ್ತಿರುವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಂಗಳೂರಿನಿಂದ ಕಾರವಾರದ ತನಕ ನಾಡ ದೋಣಿ ಮೀನುಗಾರರು ಸಭೆ ನಡೆಸಿ ಬುಲ್ಟ್ರೋಲ್ ಮೀನುಗಾರಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಈಗಾಗಲೇ ನಾಡದೋಣಿ ಮೀನುಗಾರರು ಮನವಿ ಸಲ್ಲಿಸಿದ್ದಾರೆ. ಲೈಟ್‌ ಫಿಶಿಂಗ್‌, ಬುಲ್‌ ಟ್ರಾಲ್‌ಗೆ ಭಾರತದಲ್ಲಿ ನಿಷೇಧವಿದೆ. ಸುಪ್ರೀಂ ಕೋರ್ಟ್‌ ಹಾಗೂ ಕೇಂದ್ರ ಸರಕಾರದ ಆದೇಶದ ಪ್ರಕಾರ ಈ ರೀತಿ ಫಿಶಿಂಗ್‌ ಮಾಡುವಂತಿಲ್ಲ. ಅದರ ಹೊರತಾಗಿಯೂ ಅಲ್ಲಲ್ಲಿ ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವವರ ವಿರುದ್ಧ ಲೈಸೆನ್ಸ್‌ ರದ್ಧತಿ, ದಂಡ ವಿಧಿಸುವುದರ ಮುಖಾಂತರ ಕಠಿಣ ಕ್ರಮ ಸಂಬಂಧಪಟ್ಟ ಇಲಾಖೆ ಕೈಗೊಳ್ಳಬೇಕು. ಈ ರೀತಿ ಕಾನೂನುಬಾಹಿರ ಮೀನುಗಾರಿಕೆ ಚಟುವಟಿಕೆ ಮಾಡುವುದನ್ನು ಕಂಡು ಬಂದಲ್ಲಿ ಇದರಿಂದ ಬುಲ್ಟ್ರೋಲ್ ನವರಿಗೂ ಮತ್ತು ನಾಡ ದೋಣಿ ಮೀನುಗಾರರು ಸಂಘರ್ಷಕ್ಕೆ ಕಾರಣವಾಗುತ್ತದೆ ‌ಮುಂದಿನ ದಿನಗಳಲ್ಲಿ ನಾಡ ದೋಣಿ ಮೀನುಗಾರಿಗೂ ಮತ್ತು ಬುಲ್ಟ್ರಾಲ್ ಬೋಟ್ ನವರಿಗೂ ಘರ್ಷಣೆ ಉಂಟಾಗುವ ಸಂಭವವಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಚಿವರು ಮತ್ತು ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಅಗ್ರಹಿಸಿದ್ದಾರೆ ಮತ್ತುಮುಂದಿನ ದಿನಗಳಲ್ಲಿ ಮೀನುಗಾರರು ಸೇರಿ ಹೋರಾಟ ಮಾಡುತ್ತೇವೆ ಎಂದು ಮೂರು ಜಿಲ್ಲೆಯ ನಾಡ ದೋಣಿ ಮೀನುಗಾರರ ಮುಖಂಡರು ಎಚ್ಚರಿಕೆ ನೀಡಿರುತ್ತಾರೆ

ಬೈಂದೂರು ವಲಯ ನಾಡದೋಣಿ ಮೀನುಗಾರರ ಅಧ್ಯಕ್ಷರಾದ ನಾಗೇಶ್ ಖಾರ್ವಿ, ಮರವಂತೆ ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿ, ವೆಂಕಟರಮಣ ಖಾರ್ವಿ, ಕೋಡೇರಿ ವಲಯ ಅಧ್ಯಕ್ಷ ರಾದ ಡಿ ಚಂದ್ರ ಖಾರ್ವಿ, ಮಾಜಿ ಅಧ್ಯಕ್ಷರಾದ ಮದನ್ ಕುಮಾರ್, ರಾಜ್ಯ ಒಕ್ಕೂಟ ದ ಕಾರ್ಯದರ್ಶಿ ಯಶ್ವಂತ್ ಖಾರ್ವಿ, ಮಹಾ ಈಶ್ವರ್ ಸೇವಾ ಸಮಿತಿಯ ಅಧ್ಯಕ್ಷರಾದ ರಾಮ ಖಾರ್ವಿ, ರಾಣೆಬಲೆ ಒಕ್ಕೂಟದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಮತ್ತು ಎಲ್ಲಾ ವಲಯದ ದೋಣಿಯ ಸದಸ್ಯರು ಉಪಸ್ಥಿತರಿದ್ದರು

Leave a Reply