ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ನೂತನ ವ್ಯವಸ್ಥಾಪನಾ ಸಮಿತಿ ಆದೇಶ ಅನುಷ್ಠಾನಕ್ಕೆ ಹೈಕೋರ್ಟ್ ತಡೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ನೇಮಿಸಿ ಹೊರಡಿಸಿದ್ದ ಆದೇಶ ಜಾರಿಗೊಳಿಸದಂತೆ ರಾಜ್ಯ ಹೈಕೋರ್ಟ್‌ ತಡೆ ನೀಡಿದೆ.

Call us

Click Here

ಸೆ.20ರಂದು ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು 9 ಮಂದಿ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದರು. ಆದರೆ ಸೆ.19ರಿಂದ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ವಾದಿಸಲಾಗಿದೆ. ಅಲ್ಲದೇ ಓರ್ವ ಸದಸ್ಯರ ವಿರುದ್ದ ಅಪರಾಧ ಪ್ರಕರಣ ದಾಖಲಾಗಿದೆ. ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂಬ ವಾದವನ್ನು ಹೈಕೋರ್ಟ್‌ ಮುಂದಿಡಲಾಗಿದೆ. ಈ ಬಗ್ಗೆ ಚಂದ್ರಶೇಖರ ರೆಡ್ಡಿ ಬೆಂಗಳೂರು, ರವೀಶ್‌ ಕುಮಾರ್‌ ನಿಟ್ಟೂರು, ಎ.ಎಲ್.‌ ಲಕ್ಷ್ಮೀಶ್‌ ನಿಟ್ಟೂರು ಎಂಬುವವರು ರಿಟ್‌ ಅರ್ಜಿ ಸಲ್ಲಿಸಿದ್ದು ಅದರಂತೆ ಇಲಾಖಾ ಆಯುಕ್ತರ ಆದೇಶ ಅನುಷ್ಠಾನಗೊಳಿಸಲು ತಾತ್ಕಾಲಿಕ ತಡೆ ನೀಡಿರುವ ಹೈಕೋರ್ಟ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಕುಂದಾಪ್ರ ಡಾಟ್‌ ಕಾಂ.

ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ದೇವಳದ ಓರ್ವ ಅರ್ಚಕ, ಮಹಾಲಿಂಗ ನಾಯ್ಕ್‌ ಮೆಟ್ಟಿನಹೊಳೆ ಕಾಲ್ತೋಡು, ಧನಾಕ್ಷಿ ವಿಶ್ವನಾಥ ಯಡ್ತರೆ ಬೈಂದೂರು, ಸುಧಾ ಕೆ ಪಡುವರಿ ಬೈಂದೂರು, ಕೆ. ಬಾಬು ಶೆಟ್ಟಿ ತಗ್ಗರ್ಸೆ, ಸುರೇಂದ್ರ ಶೆಟ್ಟಿ ಕೋಟೇಶ್ವರ ಕುಂದಾಪುರ, ಅಭಿಲಾಷ್‌ ಪಿ.ವಿ ಮಂಗಳೂರು, ಯು. ರಾಜೇಶ್‌ ಕಾರಂತ್‌ ಉಪ್ಪಿನಕುದ್ರು ಕುಂದಾಪುರ, ರಘುರಾಮ ದೇವಾಡಿಗ ಆಲೂರು ಕುಂದಾಪುರ ಅವರನ್ನು ಆಯ್ಕೆ ಮಾಡಲಾಗಿತ್ತು.‌ ಕುಂದಾಪ್ರ ಡಾಟ್‌ ಕಾಂ.

ವ್ಯವಸ್ಥಾಪನಾ ಸಮಿತಿ ಸದಸ್ಯರು ಸಭೆ ಸೇರಿ ಓರ್ವರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದರು. ಇದೀಗ ಆದೇಶಕ್ಕೆ ತಡೆ ಬಿದ್ದಿರುವುದರಿಂದ ಮುಂದಿನ ಆದೇಶದ ತನಕ ಸದಸ್ಯರು ಯಾವುದೇ ಸಭೆ ನಡೆಸುವಂತಿಲ್ಲ. ಈ ನಡುವೆ ವ್ಯವಸ್ಥಾಪನಾ ಸಮಿತಿ ಸದಸ್ಯರೋರ್ವರು ಕೆವಿಯಟ್‌ ಸಲ್ಲಿಸಲು ಮುಂದಾಗಿದ್ದರೂ, ಅರ್ಜಿದಾರರು ಸರಕಾರದ ಆದೇಶಕ್ಕೆ ತಡೆ ನೀಡಿರುವುದರಿಂದ ಅದೂ ಸಾಧ್ಯವಾಗಲಿಲ್ಲ. ಮಾದರಿ ನೀತಿ ಸಂಹಿತೆ ಮುಗಿದ ಕೂಡಲೇ‌ ತಡೆ ತೆರವಾಗಬಹುದು ಎಂದು ಅಂದಾಜಿಸಲಾಗಿದ್ದು, ಆ ಬಳಿಕವಷ್ಟೇ ಸಮಿತಿ ಸದಸ್ಯರು ಸಭೆ ಸೇರುವ ಸಾಧ್ಯತೆ ಇದೆ. ಈ ನಡುವೆ ಅಪರಾಧ ಪ್ರಕರಣ ಹೊಂದಿರುವ ಸದಸ್ಯರ ಅಪರಾಧ ಸಾಬೀತಾದಲ್ಲಿ ಅವರ ಸದಸ್ಯತ್ವ ರದ್ದಾಗುವ ಬಗ್ಗೆ ಆಯುಕ್ತರ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ ಪ್ರಕರಣ ಜಾರಿಯಲ್ಲಿರುವಾಗ ಸದಸ್ಯರನ್ನು ರಚಿಸಿರುವುದನ್ನೇ ಕಾನೂನು ಬಾಹಿರ ಎಂದು ಹೈಕೋರ್ಟ್‌ನಲ್ಲಿ ವಾದಿಗಳು ಪ್ರಶ್ನಿಸಲಾಗಿದ್ದು, ಈ ಪ್ರಕರಣ ಹೇಗೆ ಇತ್ಯರ್ಥಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. /ಕುಂದಾಪ್ರ ಡಾಟ್‌ ಕಾಂ/

Leave a Reply