ಕುಂದಾಪುರ: ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಯು.ಎಸ್. ಶೆಣೈ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
 ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕುಂದಾಪುರದ ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್. ಶೆಣೈ (ಯು.ಸುರೇಂದ್ರ ಶೆಣೈ) ಅವರನ್ನು ಆಯ್ಕೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

Call us

Click Here

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿರುವ ಯು.ಎಸ್.‌ ಶೆಣೈ ಅವರು ಮೈಸೂರು ವಿ.ವಿ.ಯಿಂದ ಪತ್ರಿಕೋದ್ಯಮ ತರಬೇತಿಯನ್ನು ಪಡೆದಿದ್ದರು. 1980ರಲ್ಲಿ ನವಭಾರತ ಪತ್ರಿಕೆಯ ಪತ್ರಿಕಾ ವರದಿಗಾರರಾಗಿ ಸೇವೆಯನ್ನು ಆರಂಭಿಸಿ ಇಂಡಿಯನ್ ಎಕ್ಸಪ್ರೆಸ್, ಮುಂಗಾರು, ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.

1991ರಲ್ಲಿ ಕುಂದಾಪುರ ತಾಲೂಕಿನ ಪ್ರಥಮ ಪತ್ರಿಕೆ ಕುಂದಪ್ರಭ ವಾರಪತ್ರಿಕೆಯನ್ನು ಪ್ರಾರಂಭಿಸಿ ಹಲವು ಯುವಕರಿಗೆ ಪತ್ರಕರ್ತರಾಗುವಂತೆ ಪ್ರೇರಣೆ ನೀಡಿದರು. ಉಡುಪಿ ಜಿಲ್ಲೆಯಾದ ಬಳಿಕ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿದ್ದರು. ಕುಂದಪ್ರಭ ಟ್ರಸ್ಟ್ ಹಾಗೂ ಜೈ ಕೊಂಕಣಿ ಸಂಸ್ಥೆಯ ಅಧ್ಯಕ್ಷರಾಗಿರುವ ಇವರು ಪಂಚಗಂಗಾವಳಿ ಉತ್ಸವ ಸಮಿತಿಯ ಸಂಚಾಲಕರಾಗಿ ದುಡಿದಿದ್ದರು.

ಅಖಿಲ ಭಾರತ ಕೊಂಕಣಿ ಪರಿಷತ್ ಸಮ್ಮೇಳನ, ರಾಜ್ಯ ಮಟ್ಟದ ಕೊಂಕಣಿ ಸಮ್ಮೇಳನ, ಕುಂದ ಕರಾವಳಿ ಉತ್ಸವ, ಪಂಚಗಂಗಾವಳಿ ಉತ್ಸವ ಸಹಿತ ಅನೇಕ ಸಮ್ಮೇಳನಗಳನ್ನು ಸಂಘಟಿಸಿದ ಕೀರ್ತಿ ಇವರದ್ದಾಗಿದೆ. ಯಕ್ಷಗಾನ, ಕಲೆ, ಸಾಹಿತ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಆಸಕ್ತಿ ಹೊಂದಿರುವ ಇವರು, ಕುಂದಾಪುರ ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಲತಃ ಗಂಗೊಳ್ಳಿಯವರಾದ ಯು.ಎಸ್.ಶೆಣೈ ಅವರು ಕುಂಭಾಶಿಯಲ್ಲಿ ನೆಲೆಸಿದ್ದಾರೆ.

ಕರ್ನಾಟಕ ಸಚಿವಾಲಯದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಒಟ್ಟು 11 ಮಂದಿ ವಿವಿಧ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಪದನಿಮಿತ್ತ ಸದಸ್ಯರಾಗಿ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Click here

Click here

Click here

Click Here

Call us

Call us

ಮಾಧ್ಯಮ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದವರು:
1. ಶಿವಾನಂದ ತಗಡೂರು, ವಿಜಯವಾಣಿ ಬೆಂಗಳೂರು
2. ಶೋಭಾ ಎಂ.ಸಿ., ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
3. ಎಂ.ಇ. ಮಂಜುನಾಥ್, ಜನತಾವಾಣಿ, ದಾವಣಗೆರೆ ಜಿಲ್ಲೆ
4. ಸಂಗಮೇಶ ಚೂರಿ, ವಿಜಯಕರ್ನಾಟಕ ವಿಜಯಪುರ ಜಿಲ್ಲೆ
5. ಜೆ. ಅಬ್ಬಾಸ್ ಮುಲ್ಲಾ, ಪತ್ರಕರ್ತರು, ಹುಬ್ಬಳ್ಳಿ
6. ಎಚ್.ವಿ. ಕಿರಣ್, ಟಿವಿ9, ಬೆಂಗಳೂರು
7. ಅನಿಲ್ ವಿ. ಗೆಜ್ಜಿ, ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು
8. ಕೆಂಚೇಗೌಡ, ವಿಜಯಕರ್ನಾಟಕ, ಬೆಂಗಳೂರು
9. ಯು. ಎಸ್. ಶೆಣೈ, ಕುಂದಪ್ರಭ, ಉಡುಪಿ
10. ರವಿ ಕೋಟಿ, ಆಂದೋಲನಾ ಪತ್ರಿಕೆ, ಮೈಸೂರು
11. ರಶ್ಮಿ ಎಸ್, ಬೆಂಗಳೂರು

ಪದನಿಮಿತ್ತ ಸದಸ್ಯರು:
ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು
ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.

Leave a Reply