ಸಮಾಜದಲ್ಲಿನ ಅಸ್ಥಿರತೆಯನ್ನು ಹೋಗಲಾಡಿಸಲು ಯುವಜನತೆ ಶಕ್ತಿವಂತರಾಗಿ: ನ್ಯಾ. ಕಿರಣ್ ಎಸ್ ಗಂಗಣ್ಣವರ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಸಮಾಜದಲ್ಲಿನ ಅಸ್ಥಿರತೆಯಿಂದಾಗಿ ಬಾಲ್ಯವಿವಾಹ, ಬಾಲಕಾರ್ಮಿಕ, ದೌರ್ಜನ್ಯ ಸೇರಿದಂತೆ ಮತ್ತಿತರ ಪ್ರಕರಣಗಳು ಕಂಡುಬರುತ್ತಿದ್ದು, ಅವುಗಳನ್ನು ಎದುರಿಸಿ, ಪ್ರಕರಣಗಳು ಆಗದಂತೆ  ತಡೆಯುವ ನಿಟ್ಟಿನಲ್ಲಿ ಯುವಜನತೆ ಶಕ್ತಿವಂತರಾಗಬೇಕು ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್ ಗಂಗಣ್ಣವರ್ ಹೇಳಿದರು.

Call us

Click Here

ಅವರು ಅಂದು ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರಕ್ಷಕ ಇಲಾಖೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಪ್ರಯುಕ್ತ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ ಕಾರ್ಯವೈಖರಿ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳಂತ ಆಡಳಿತ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೈನಂದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೈಂಗಿಕ ಬಲತ್ಕಾರ, ಬಾಲ್ಯವಿವಾಹ, ಬಾಲಕಾರ್ಮಿಕ ಪ್ರಕರಣಗಳು ಆಳವಾದ ಸಮಸ್ಯೆಗಳನ್ನು ತೋರಿಸುವ ವಿಷಯಗಳಾಗಿವೆ. ಸಮಾಜದಲ್ಲಿರುವ ಅಸ್ಥಿರತೆಗೋಸ್ಕರ ವಿವಾಹದ ಅನಿವಾರ್ಯತೆ ಕಂಡುಕೊಂಡು ಬಾಲ್ಯವಿವಾಹ ನಡೆಯುತ್ತಿದ್ದು, ಇದು ಯೋಗ್ಯವಲ್ಲದ ಪದ್ಧತಿ ಎಂದು ಸ್ವಾತಂತ್ರö್ಯ ಪೂರ್ವದಿಂದಲೂ ಇದರ ವಿರುದ್ಧ ಅನೇಕ ಚಳುವಳಿಗಳೂ ನಡೆದಿವೆ. ಇದು ಸರಳವಾದ ಸಮಸ್ಯೆಯಲ್ಲ. ನಮ್ಮ ನಡವಳಿಕೆಯನ್ನು ಬದಲಿಸಿಕೊಂಡು ಇವುಗಳ ನಿರ್ಮೂಲನೆಗೆ ಜೊತೆಯಾಗಿ ಶ್ರಮಿಸೋಣ ಎಂದರು.

ಸಮಾಜದಲ್ಲಿ ನಡೆಯುವ ಕೆಟ್ಟ ಕೃತ್ಯಗಳನ್ನು ವಿರೋಧಿಸುವುದರೊಂದಿಗೆ ತೊಡೆದುಹಾಕಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಸಮಾಜದಲ್ಲಿ ನಡೆದ ಎಲ್ಲಾ ಅಪರಾಧಗಳು ಬೆಳಕಿಗೆ ಬರುವುದಿಲ್ಲ. ದೂರುಗಳು ಬಂದಾಗ ಪ್ರತಿಸ್ಪಂದನೆ ನಡೆದು, ತನಿಖೆ ನಡೆದು, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗುವವರೆಗೆ ನ್ಯಾಯಿಕ ಪ್ರಕ್ರಿಯೆಗಳು ಇರುತ್ತವೆ. ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಭವಾತ್ಮಕವಾದ ಶಿಕ್ಷಣ ನೀಡುವ ಮೂಲಕ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆ ಕಾರ್ಯವೈಖರಿ ತಿಳಿಸುವ ಮತ್ತು ಜನಸಾಮಾನ್ಯರಲ್ಲಿರುವ ಆಂತರಿಕ ಭಯವನ್ನು ಹೋಗಲಾಡಿಸಿ ಸ್ನೇಹಮಯ ಪರಿಸರ ಒದಗಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ ಎಂದರು.

Click here

Click here

Click here

Click Here

Call us

Call us

ಬಾಲ್ಯವಿವಾಹ ತಡೆಗಟ್ಟಲು ಸರಕಾರದ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ದೂರು ಸಲ್ಲಿಸಬಹುದಾಗಿದೆ. ಸ್ಥಳಿಯವಾಗಿ ಬಾಲ್ಯವಿವಾಹ ಆಗುವಂತಹ ಪ್ರಕರಣಗಳು ಕಂಡುಬAದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಬೇಕು. ದೇವಸ್ಥಾನಗಳಲ್ಲಿ ಆದ ಸಂದರ್ಭದಲ್ಲಿ ಅರ್ಚಕರುಗಳು ಮಾಹಿತಿ ನೀಡದಿದ್ದಲ್ಲಿ ಅವರುಗಳ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲು ಕ್ರಮವಹಿಸಲಾಗುವುದು ಎಂದರು.

ಹೆಣ್ಣುಮಗು ಹುಟ್ಟಿದಾಗಿನಿಂದಲೂ ವಿವಾಹದವರೆಗೆ ಪೋಷಕರಲ್ಲಿ ಹಾಗೂ ಕುಟುಂಬದಲ್ಲಿ ಆತಂಕ ಇರುವುದು ಸರ್ವೇ ಸಾಮಾನ್ಯ. ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಗಮನಹರಿಸಬೇಕು. ಬಾಲ್ಯದಲ್ಲಿಯೇ ಅವರುಗಳ ಸರಿ-ತಪ್ಪುಗಳನ್ನು ತಿದ್ದುವ ಪ್ರಯತ್ನ ಪೋಷಕರುಗಳು ಮಾಡಬೇಕು. ಅನೇಕ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳೂ ಸಹ ಭವಿಷ್ಯದ ಅರಿವಿಲ್ಲದೇ ಆಕರ್ಷಣೆಗೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಆತುರದ ನಿರ್ಧಾರಗಳಿಗೆ ಬಲಿಯಾಗದೇ ಹೆಣ್ಣು ಮಕ್ಕಳು ಮೊದಲು ಶಿಕ್ಷಣದ ಕಡೆಗೆ ಗಮನಹರಿಸಬೇಕು ಎಂದ ಅವರು, ನಮ್ಮ ಭವಿಷ್ಯ ನಮ್ಮ ಕೈಯಲ್ಲಿದ್ದು, ವಿದ್ಯೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿನಿಯರು ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಸಮಾಜದಲ್ಲಿನ ಅನಿಷ್ಠ ಪದ್ಧತಿಯಾದ ಬಾಲಕಾರ್ಮಿಕ, ಬಾಲ್ಯವಿವಾಹ ದಂತಹ ಪದ್ಧತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹೆಣ್ಣು ಮಕ್ಕಳ ಮೇಲಾಗುವ ದೌರ್ಜಲ್ಯ, ಲೈಂಗಿಕ ಅತ್ಯಾಚಾರಗಳಂತಹ ಪ್ರಕರಣಗಳು ನಡೆಯದ ರೀತಿಯಲ್ಲಿ ಘೋರ ಶಿಕ್ಷೆಗಳನ್ನು ವಿಧಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ ಡಿ.ಟಿ. ಪ್ರಭು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾಬಾಯಿ (ಪ್ರಭಾರ), ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ದೀಪಾ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಿಂದ ಜಿಲ್ಲಾ ನ್ಯಾಯಾಲಯದ ವರೆಗೆ ಹಾಗೂ ಕಾರ್ಯಕ್ರಮದ ನಂತರ ನ್ಯಾಯಾಲಯದಿಂದ ನಗರ ಪೊಲೀಸ್ ಠಾಣೆಯ ವರೆಗೆ ಕಾರ್ಯವೀಕ್ಷಣೆಗೆ ಕಾಲೇಜಿನ ವಿದ್ಯಾರ್ಥಿನಿಯರಿಂದ ಜಾಥಾ ನಡೆಯಿತು.

Leave a Reply