ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಾವುದೇ ಸಂಸ್ಥೆ ಬೆಳೆಯಬೇಕಾದರೆ ಸಮಾನ ಮನಸ್ಕ ಸದಸ್ಯರು ಮುಖ್ಯವಾಗಿರಬೇಕು. ಅವರೆಲ್ಲರ ಸತ್‌ಚಿಂತನೆಗಳ ಜತೆಗೆ ಆಸಕ್ತಿ ಹಾಗೂ ಛಲವಿದ್ದರೆ ಅಸಾಧ್ಯವೆಂಬುವುದು ಯಾವುದೂ ಇಲ್ಲ. ಮನಃಪೂರ್ವಕವಾಗಿ ಮಾಡುವ ಉತ್ತಮ ಸೇವೆಗಳಿಂದ ಸಿಗುವ ಸಂತೋಷ ಶಾಶ್ವತವಾಗಿರುತ್ತದೆ ಎಂದು ಇನ್ನರ್‌ವೀಲ್ ಕ್ಲಬ್ ಡಿಸ್ಟಿಕ್ಟ್ ಛೇರ್ಮನ್ ವೈಶಾಲಿ ವಿ. ಕುಡ್ವಾ ಹೇಳಿದರು.
ಇಲ್ಲಿನ ಇನ್ನರ್‌ವೀಲ್ ಕ್ಲಬ್‌ಗೆ ಗುರುವಾರ ಅಧೀಕೃತ ಭೇಟಿ ನೀಡಿ ನಂತರ ಶ್ರೀ ಶಾರದಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಳೆದ 26 ವರ್ಷಗಳಿಂದ ತನ್ನ ಕಾರ್ಯ ಚಟುವಟಿಕೆಯಿಂದ ಬೈಂದೂರು ಇನ್ನರ್‌ವೀಲ್ ಕ್ಲಬ್ ಬಹಳ ಎತ್ತರಕ್ಕೆ ಬೆಳೆದಿದೆ. ಈ ವರ್ಷದ ಸಂಸ್ಥೆಯ ಧ್ಯೇಯವಾಕ್ಯ ’ಹಾರ್ಟ್ ಬೀಟ್ ಆಫ್ ಹ್ಯುಮಾನಿಟಿ’ ಅದರಂತೆಯೇ ಒಂದು ಜೀವಕ್ಕೆ ಹೃದಯ ಬಡಿತ ಎಷ್ಟು ಮುಖ್ಯವೋ ಮನುಕುಲದ ಒಳಿತಿಗಾಗಿ ನಾವು ಮಾಡುವ ಪ್ರತಿ ಕಾರ್ಯವು ಚಿಕ್ಕದಿರಲಿ ದೊಡ್ಡದಿರಲಿ ಅಷ್ಟೇ ಮುಖ್ಯ ಎಂಬುದನ್ನು ಬಲವಾಗಿ ನಂಬಬೇಕು. ಇದರೊಂದಿಗೆ ಸಾಕುಪ್ರಾಣಿಗಳ ರಕ್ಷಣೆಯೂ ಅಗತ್ಯ ಎಂದರು.
ಕ್ಲಬ್ ಅಧ್ಯಕ್ಷೆ ಗುಲಾಬಿ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಸದಸ್ಯೆ ಡಾ. ನಂದಿನಿ ಸಂಪಾದಕತ್ವದ ವಾರ್ಷಿಕ ಬುಲೆಟಿನ್ ಅನ್ನು ರೋಟರಿ ಅಧ್ಯಕ್ಷ ಮೋಹನ ರೇವಣ್ಕರ್ ಬಿಡುಗಡೆಗೊಳಿಸಿದರು. ನೂತನ ಸದಸ್ಯರಾಗಿ ಸುಪ್ರೀತಾ ದೀಪಕ್ ಶೆಟ್ಟಿ, ಮಮತಾ ಶೆಟ್ಟಿ, ವಿದ್ಯಾ ಅಶೋಕ ಶೇಟ್ ಸೇರ್ಪಡೆಗೊಂಡರು ಆಶ್ರಮ ಶಾಲೆಗೆ ಲತಿಕಾ ನಂಬಿಯಾರ್ ಕೊಡಮಾಡಿದ ಸುಮಾರು 20 ಸಾವಿರ ಮೌಲ್ಯ ಪಾಠೋಪಕರಣಗಳನ್ನು ಶಾಲಾ ಮುಖ್ಯಶಿಕ್ಷಕ ರಾಜೇಶ ಇವರಿಗೆ ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ಚೈತ್ರಾ ಸತೀಶ್ ವರದಿ ಮಂಡಿಸಿದರು. ಜಿಲ್ಲಾ ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿ ರಜನಿ ಭಟ್, ಐಎಸ್‌ಒ ದೀಪಾ ಭಂಡಾರಿ ಇದ್ದರು. ಆಶಾ ಕಿಶೋರ್ ಪ್ರಾರ್ಥಿಸಿದರು. ಭಾನುಮತಿ ಜಯಾನಂದ್, ಪಿಂಕಿ ಕರ್ವಾಲೋ ನಿರೂಪಿಸಿದರು. ಶಾರದಾ ನಾರಾಯಣ ವಂದಿಸಿದರು.
ಸಭೆಗೂ ಮೊದಲು ಇನ್ನರ್‌ವೀಲ್ ಕ್ಲಬ್ ವತಿಯಿಂದ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿ ಗೆ ಕೊಡುಗೆಯಾಗಿ ನೀಡಿದ ಮೂರು ಬೆಂಚ್‍ಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಇದನ್ನೂ ಓದಿ ► ಬೈಂದೂರು ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಸಿಎ ದೇವ್ ಆನಂದ್ ಅಧಿಕೃತ ಭೇಟಿ – https://kundapraa.com/?p=77174 .