ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ತಗ್ಗರ್ಸೆ ಮೋಗವೀರ ಗರಡಿ ಸಾರ್ವಜನಿಕ ಶ್ರೀ ಶಾರಾದೋತ್ಸವ ಸಮಿತಿಯ ಶಾರದೋತ್ಸವ ರಜತ ಮಹೋತ್ಸವ ಸಂಭ್ರಮ ಅ.06ರಿಂದ ಅ.07ರ ತನಕ ಜರುಗಲಿದೆ.
ಅ.06ರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 01ರ ತನಕ ಪ್ರಸಾದ್ ನೇತ್ರಾಲಯದಿಂದ ಉಚಿತ ನೇತ್ರ ತಪಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ, ಬೆಳಿಗ್ಗೆ 10.30ಕ್ಕೆ ದುರ್ಗಾಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಅಂಗನವಾಡಿ ಮಕ್ಕಳಿಂದ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಲಿದೆ.
ರಾತ್ರಿ 09ರಿಂದ ದುರ್ಗಾ ಕಲಾತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯದ ಕನ್ನಡ ಅದ್ದೂರಿ ಭಕ್ತಿ ಪ್ರಧಾನ ನಾಟಕ ಕಲಿಯುಗದ ಕಾಳಿ ಮಂತ್ರದೇವತೆ ನಾಟಕ ನಡೆಯಲಿದೆ ಎಂದು ತಗ್ಗರ್ಸೆ ಮೋಗವೀರ ಗರಡಿ ಸಾರ್ವಜನಿಕ ಶ್ರೀ ಶಾರಾದೋತ್ಸವ ಸಮಿತಿಯ ಅಧ್ಯಕ್ಷ ಶಿವಾನಂದ ಗಾಣಿಗ ಹಾಗೂ ಕಾರ್ಯದರ್ಶಿ ಅಭಿಷೇಕ್ ಸುವರ್ಣ ತಿಳಿಸಿದ್ದಾರೆ.










