ಕಸ್ತೂರಿ ರಂಗನ್ ವರದಿ ವಿರೋಧಿಸಿ ಪರಿಷತ್ ಉಪಚುನಾವಣೆ ಬಹಿಷ್ಕರಿಸಿದ ಜಡ್ಕಲ್ ಪಂಚಾಯತ್ ಸದಸ್ಯರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು,ಸೆ.30:
ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಡ್ಕಲ್ ಗ್ರಾಮ ಪಂಚಾಯತಿಯ ಎಲ್ಲಾ 18 ಸದಸ್ಯರು ಅಕ್ಟೋಬರ್ 21ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಕೈಗೊಂಡಿದ್ದಾರೆ.

Call us

Click Here

ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿರುವ ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಪಂಚಾಯತಿಯ ಸದಸ್ಯರು, ಮತದಾನಕ್ಕೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶ, ಬಫರ್ ಝನ್ ಶೂನ್ಯಕ್ಕೆ ಇಳಿಸುವುದು, ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶದ ಬಗ್ಗೆ ಹೊರಡಿಸಿರುವ ಸುತ್ತೋಲೆಯನ್ನು ಮೂಕಾಂಬಿಕಾ ಅಭಯಾರಣ್ಯದ ಸೂಕ್ಷ್ಮ ಪ್ರದೇಶ ಎಂಬ ನೆಪದಿಂದ ಸಕ್ಷಮ ಪ್ರಾಧಿಕಾರದಿಂದ ವಾಣಿಜ್ಯ ಭೂ-ಪರಿವರ್ತನೆಗೆ ಪೂರ್ವಾನುಮತಿಯನ್ನು (ಯೋಜನಾ ಪ್ರಾಧಿಕಾರ ಉಡುಪಿ) ಪಡೆಯುವ ಸೂಚನೆ ರದ್ದುಗೊಳಿಸುವಂತೆ ಬೇಡಿಕೆಯನ್ನು ಸರಕಾರದ ಮುಂದಿರಿಸಿದ್ದಾರೆ.

ಜಡ್ಕಲ್ ಗ್ರಾಮ ಪಂಚಾಯತ್ ಸದಸ್ಯರಾದ ಪಾರ್ವತಿ, ಭಾರತಿ ಜಿ. ಶೆಟ್ಟಿ, ವನಜಾಕ್ಷಿ ಎಸ್‌.ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಕೆ.ವಿದ್ಯಾವತಿ ಕನ್ನಂತ, ನಾರಾಯಣ ಶೆಟ್ಟಿ, ವಿ.ಜೆ ದೇವದಾಸ್, ಲಕ್ಷ್ಮೀ ಎಸ್.ಚಂದನ್, ಶ್ರೀಮತಿ, ಚಂದ್ರಮೋಹನ್, ಸೂಲ್ಯ ಬೋವಿ, ಸುಂದರನಾರಾಯಣ, ಸುನೀತಾ, ಮಂಜು, ಶ್ರೀನಿವಾಸ, ಸವಿತಾ, ಪಾರ್ವತಿ ಹಾಗೂ ನಾಗೇಶ ಗ್ರಾಮಸ್ಥರ ಹಿತದೃಷ್ಟಿಯಿಂದ ವಿಧಾನ ಪರಿಷತ್ ಉಪ ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ.

Leave a Reply