ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಮಹಾತ್ಮರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು: ಶರಣ ಕುಮಾರ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯಲ್ಲಿ ನಡೆದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಚಾರ್ಯರೂ ಆದ ಶರಣ ಕುಮಾರ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ, ವಿದ್ಯಾರ್ಥಿಗಳು ಕಲಿಕೆಯ ಜೊತೆಯಲ್ಲಿ ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು. ಆಗ ಮಾತ್ರ ನಾವು ಕಲಿತ ವಿದ್ಯೆಗೆ ಅರ್ಥ ಸಿಗಲು ಸಾಧ್ಯ, ಗಾಂಧೀಜಿ ಮತ್ತು ಶಾಸ್ತ್ರಿಯವರ ಮೌಲಿಕವಾದ ಆದರ್ಶ ಗುಣಗಳನ್ನು ನಾವು ಪಾಲಿಸಿದರೆ ಅದು ಮಹಾನ್ ವ್ಯಕ್ತಿಗಳಿಗೆ ನಾವು ಕೊಡಬಹುದಾದ ಬೆಲೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Call us

Click Here

ಇದೇ ಸಂದರ್ಭದಲ್ಲಿ ಸಹ ಶಿಕ್ಷಕಿ ಲತಾ ದೇವಾಡಿಗ ಮಾತನಾಡುತ್ತಾ, ಗಾಂಧೀಜಿಯವರ ಜೀವನದಲ್ಲಿಯ ಕೆಲವು ಮಹತ್ತರ ಘಟನೆಗಳನ್ನು ಉಲ್ಲೇಖಿಸಿ ಮಹಾತ್ಮ ಗಾಂಧೀಜಿಯವರ ಸರಳತೆ, ಸತ್ಯ ಮತ್ತು ಅಹಿಂಸಾ ತತ್ವದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ವಿದ್ಯಾರ್ಥಿಗಳಾದ ಹರಿ ಮತ್ತು ನಿಧಿ ಗಾಂಧೀಜಿ ಅವರ ವ್ಯಕ್ತಿತ್ವದ ಕುರಿತಾಗಿ ಮಾತನಾಡಿದರು. ಶಿಕ್ಷಕಿ ಬೇಬಿ ನಾಯಕ್ ಮತ್ತು ವಿದ್ಯಾರ್ಥಿಗಳ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಸ್ವಾಗತಿಸಿ, ನಿರೂಪಿಸಿ, ಸಹ ಶಿಕ್ಷಕಿ ಸವಿತಾ ಭಟ್ ವಂದಿಸಿದರು.

Leave a Reply