ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸುತ್ತದೆ: ಡಾ. ರವೀಂದ್ರ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ( ಪದವಿ ಪೂರ್ವ ಶಿಕ್ಷಣ ಇಲಾಖೆ ) ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಇದರ ವತಿಯಿಂದ “ಜೀವವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ, ಲಿಂಗ ಸಮಾನತೆ ಸಾಧಿಸಿ” ಎಂಬ ಶೀರ್ಷಿಕೆಯಡಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲೆ ವಿಭಾಗ, ಬಜಗೋಳಿಯಲ್ಲಿ ಅಕ್ಟೋಬರ್ 2ರಿಂದ 8 ರವರೆಗೆ ನಡೆಯುವ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರವು ಜ್ಯೋತಿ ಪ್ರಜ್ವಲನದ ಮೂಲಕ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.

Call us

Click Here

ಉದ್ಘಾಟಕರಾಗಿ ಆಗಮಿಸಿದ ರಾಜ್ಯ ಕ್ರಷರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಉದ್ಯಮಿಯಾದ ಡಾ. ರವೀಂದ್ರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ವ್ಯಕ್ತಿತ್ವವನ್ನು ಅರಳಿಸುವ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೇವಲ ನಮಗಾಗಿ ಬದುಕದೆ ಇತರರಿಗಾಗಿ, ಸಮಾಜ ಕಾರ್ಯಕ್ಕಾಗಿ ಜೀವನವನ್ನು ಮೀಸಲಿಡಬೇಕು. ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸುತ್ತದೆ ಎಂದು ನುಡಿದರು.

ದಿಕ್ಸೂಚಿ ಭಾಷಣಗೈದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ಅವರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಶಿಬಿರದ ಉದ್ದೇಶ ಮತ್ತು ಶಿಬಿರದಲ್ಲಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳ ವಿವರವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸವಿತಾ ಎರ್ಮಾಳ್, ಪ್ರಾಂತೀಯ ವಿಭಾಗಾಧಿಕಾರಿಗಳು, ಮಂಗಳೂರು ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಅವರು ಮಾತನಾಡಿ ’ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ, ಲಿಂಗ ಸಮಾನತೆ ಸಾಧಿಸಿ’ ಶೀರ್ಷಿಕೆಯನ್ನು ಶಿಬಿರಾರ್ಥಿಗಳಿಗೆ ತಿಳಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಭಾಸ್ಕರ್ ಎಸ್ ಪೂಜಾರಿ ಅಧ್ಯಕ್ಷರು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗ ಬಜಗೋಳಿ ಅವರು ಮಾತನಾಡಿ, ಕ್ರಿಯೇಟಿವ್ ಕಾಲೇಜಿನ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಬಜಗೋಳಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಿಕೊಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಶಿಬಿರದ ಎಲ್ಲಾ ದಿನಗಳಲ್ಲಿಯೂ ಶಾಲಾ ಎಸ್‌ಡಿಎಂಸಿ ಸದಸ್ಯರು ಜೊತೆಯಾಗಲಿದ್ದಾರೆ ಎಂದರು.

Click here

Click here

Click here

Call us

Call us

ಗೌರವ ಉಪಸ್ಥಿತರಾದ ವಿದ್ವಾನ್ ಗಣಪತಿ ಭಟ್, ಪ್ರಾಂಶುಪಾಲರು, ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಹಾಗೂ ಸಹ ಸಂಸ್ಥಾಪಕರು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಅವರು ಮಾತನಾಡಿ ’ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳೇ ಸಮಾಜದ ಭದ್ರ ಬುನಾದಿಯಾಗಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅರಳಿಸುವುದರ ಜೊತೆಗೆ ಚಾರಿತ್ರ್ಯ ಬೆಳೆಸುತ್ತದೆ ಎಂದರು. ಶಿಬಿರದ ಯಶಸ್ಸಿಗೆ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣೇಶ್ ಕಾಮತ್, ಶ್ರೀದೇವಿ ಕ್ಯಾಶ್ಯೂ ಇಂಡಸ್ಟ್ರೀಸ್, ಮುಡ್ರಾಳು ಬಜಗೋಳಿ, ಉದ್ಯಮಿಯಾದ ಮಹಮ್ಮದ್ ಗೌಸ್ ಸ್ಟೋನ್ ಡಿಸೈನರ್, ಕಾಜರಬೈಲ್ ಮಿಯ್ಯಾರು ಕಾರ್ಕಳ, ಜೆರಾಲ್ಡ್ ಡಿ. ಸಿಲ್ವಾ, ಉದ್ಯಮಿಯಾದ ಮಿಯ್ಯಾರು, ಲಕ್ಷ್ಮೀನಾರಾಯಣ ಭಟ್ ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಬಸವರಾಜ ತಾವರಗಿ, ( ಹಿರಿಯ ಶಿಕ್ಷಕರು ) ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗ ಬಜಗೋಳಿ ಉಮೇಶ್, ಸಂಯೋಜನಾಧಿಕಾರಿಗಳು, ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದದವರು, ಎನ್ಎಸ್ಎಸ್ ಶಿಬಿರಾರ್ಥಿಗಳು, ಬಜಗೋಳಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್ ಕೆ. ಅವರು ನಿರೂಪಿಸಿ, ಶಿಬಿರಾಧಿಕಾರಿಗಳಾದ ಉಮೇಶ್ ಅವರು ವಂದನಾರ್ಪಣೆಗೈದರು.

Leave a Reply