ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ: ಜನತಾ ಪ.ಪೂ ಕಾಲೇಜು ಚಾಂಪಿಯನ್. 14 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ/ಬಾಲಕಿಯರ ಕುಸ್ತಿ ‌ಪಂದ್ಯಾಟದಲ್ಲಿ ಒಟ್ಟು 29 ವಿದ್ಯಾರ್ಥಿಗಳು ಪದಕಗಳನ್ನು ಪಡೆಯುವುದರ ಮೂಲಕ ಜಿಲ್ಲಾ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದಿರುತ್ತಾರೆ.

14 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಕ್ರಮವಾಗಿ ತರಣ್ (61ಕೆ.ಜಿ.ವಿಭಾಗ), ಸಫಾನ್ ಅಲಿ (55ಕೆ.ಜಿ ವಿಭಾಗ), ನಿಖಿಲ್ (60ಕೆ.ಜಿ.ವಿಭಾಗ), ಸ್ರಜನ್ (63ಕೆ.ಜಿ.ವಿಭಾಗ), ಆರ್ಯನ್ (72ಕೆ.ಜಿ.ವಿಭಾಗ), ಪ್ರಣಿತ್ (77ಕೆ.ಜಿ.ವಿಭಾಗ), ಕಿಶನ್ (82ಕೆ.ಜಿ.ವಿಭಾಗ), ಅಲೆನ್ (87ಕೆ.ಜಿ.ವಿಭಾಗ) ಪನ್ನಗ (97ಕೆ.ಜಿ.ವಿಭಾಗ), ಹ್ರತ್ವಿಕ್(97+ಕೆ.ಜಿ.ವಿಭಾಗ) ಅನನ್ಯ (50ಕೆ.ಜಿ.ವಿಭಾಗ), ಅನುಷಾ ಪಿ. (68ಕೆ.ಜಿ.ವಿಭಾಗ), ಅನುಷಾ (72ಕೆ.ಜಿ.ವಿಭಾಗ), ಗಾಯತ್ರಿ (76ಕೆ.ಜಿ.ವಿಭಾಗ).

Call us

Click Here

ಬೆಳ್ಳಿಯ ಪದಕ ವಿಜೇತರು ಕ್ರಮವಾಗಿ, ರತನ್ (65ಕೆ.ಜಿ.ವಿಭಾಗ), ಆದಿತ್ಯ (74 ಕೆ.ಜಿ.ವಿಭಾಗ), ಶಶಾಂಕ(82 ಕೆ.ಜಿ.ವಿಭಾಗ), ಅಶ್ವತ್ಥಾಮ್ (97ಕೆ.ಜಿ.ವಿಭಾಗ)  ಸ್ಕಂದ (67ಕೆ‌.ಜಿ.ವಿಭಾಗ) ಸಿಂಚನಾ ಶೆಟ್ಟಿ (57ಕೆ.ಜಿ.ವಿಭಾಗ).

ಕಂಚಿನ ಪದಕ ವಿಜೇತರು ಕ್ರಮವಾಗಿ, ಆರ್ಶನ್ (57ಕೆ.ಜಿ.ವಿಭಾಗ) ಸೂರಜ್ (70ಕೆ.ಜಿ.ವಿಭಾಗ), ಸ್ವಸ್ತಿಕ್ (79ಕೆ.ಜಿ.ವಿಭಾಗ), ಮಂದಿರ್ (92ಕೆ.ಜಿ.ವಿಭಾಗ), ಸಿಂಚನಾ (53ಕೆ.ಜಿ.ವಿಭಾಗ), ಸಿಂಚನಾ (55ಕೆ.ಜಿ.ವಿಭಾಗ) ಹರ್ಷಿನಿ (59ಕೆ.ಜಿ.ವಿಭಾಗ), ಸಿಂಚನಾ ಡಿ. (62ಕೆ.ಜಿ.ವಿಭಾಗ), ತನಿಷಾ (65ಕೆ.ಜಿ.ವಿಭಾಗ).

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply