ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ನಾಯ್ಕನಕಟ್ಟೆ ನಿವಾಸಿ ಲಕ್ಷ್ಮೀ (28) ಕುಂದಾಪುರದಿಂದ ಬಸ್ಸಿನಲ್ಲಿ ಮನೆಯ ಕಡೆಗೆ ಹೋದವರು ನಾಪತ್ತೆಯಾಗಿದ್ದಾರೆ.
ಲಕ್ಷ್ಮೀ ನಾಯ್ಕನಕಟ್ಟೆಯ ನಂದನವನದಲ್ಲಿ ತನ್ನ ಅಕ್ಕ ಗೀತಾ ಅವರೊಂದಿಗೆ ವಾಸವಾಗಿದ್ದು, ಅಕ್ಟೋಬರ್ 15ರಂದು ಕುಂದಾಪುರ ವಡೇರ ಹೋಬಳಿ ಎಂಬಲ್ಲಿ ಇನ್ನೊಬ್ಬ ಅಕ್ಕ ಪಾರ್ವತಿ ಮನೆಗೆ ಬಂದಿದ್ದರು. ನಂತರ ಅವರ ಪತಿ ಶಂಕರ್ ಅದೇ ದಿನ ಅಪರಾಹ್ನ 3 ಗಂಟೆಗೆ ಕುಂದಾಪುರದಿಂದ ಬೈಂದೂರು ಕಡೆಗೆ ಹೋಗುವ ಬಸ್ಸಿಗೆ ಹತ್ತಿಸಿ ಮನೆಗೆ ಕಳುಹಿಸಿದ್ದಾರೆ. ಆದರೆ ಅವರು ಮನೆಗೆ ತೆರಳದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.