ಹಿಂದೂಗಳ ಭಾವನೆಗೆ ವಿನಾಕಾರಣ ಧಕ್ಕೆಯನ್ನುಂಟು ಮಾಡಿದರೇ ಉಗ್ರ ಹೋರಾಟ: ಹಿಂದೂ ಸಂಘಟನೆಗಳ ಎಚ್ಚರಿಕೆ
ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಲ್ಲೂರು ರಾಷ್ಟ್ರೀಯ ಹೆದ್ದಾರಿ ಬಳಿಯ ವೃತ್ತದಲ್ಲಿ ಹಾಕಲಾಗಿದ್ದ ಭವಗದ್ವಜವನ್ನು ಕೋಮು ಸಂಘ ಸಂಘರ್ಷದ ಕಾರಣವೊಡ್ಡಿ ತೆರವುಗೊಳಿಸಿ ತಲ್ಲೂರು ಗ್ರಾಮ ಪಂಚಾಯತ್ ನಿರ್ಧಾರವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಇಂದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಲ್ಲೂರು ವೃತ್ತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಭಗವದ್ವಜ ಹಾರಾಡುತ್ತಿದೆ. ಇಂದು ಎಂದಿಗೂ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿಲ್ಲ. ಊರಿನ ಶಾಂತಿ ಸೌಹಾರ್ದತೆ ಸಂಕೇತವಾಗಿ ಮುಂದುವರಿದಿದೆ. ದ್ವಜ ಹಾರಿಸುವುದರಿಂದಲೇ ತಲ್ಲೂರಿನಲ್ಲಿ ಕೋಮ ಸಂಘರ್ಷ ನಡೆಯುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾರದ್ದೋ ಹಿತಾಸಕ್ತಿಗಾಗಿ ಧ್ವಜ ತೆರವುಗೊಳಿಸಿ ಹಿಂದೂಗಳ ಭಾವನೆ ಘಾಸಿಯನ್ನುಂಟು ಮಾಡಲಾಗಿದೆ ಎಂದು ಸಂಘ ಪರಿವಾರ ಆರೋಪಿಸಿವೆ.
ಕರ್ನಾಟಕ ರಾಜ್ಯದ ಹೆಚ್ಚಿನ ಸರ್ಕಲ್‌ಗಳಲ್ಲಿ ಕೇಸರಿ ಧ್ವಜ ಹಾರಾಡುತ್ತಿದೆ. ಅಲ್ಲೆಲ್ಲಿಯೂ ಮೂಡದ ಕೋಮು ಸಂಘರ್ಷ ತಲ್ಲೂರಿನಲ್ಲಿ ಹೇಗೆ ಉದ್ಬವಿಸುತ್ತದೆ ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತರು, ತಲ್ಲೂರಿನ ಧ್ವಜ ವೈಯಕ್ತಿಕ ದ್ವೇಷದಿಂದ ತೆಗೆದುಹಾಕಿ ಕೋಮು ಗಲಭೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಹಿಂದೂ ಭಾವನೆ ಕೆರಳಿಸಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆಂದು ಎಚ್ಚರಿಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಪ್ರತಿಭಟನೆಯಲ್ಲಿ ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಯುವಮೋರ್ಚಾದ ರಾಘವೇಂದ್ರ ನೆಂಪು, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಶಂಕರ್ ಅಂಕದಕಟ್ಟೆ, ಆಜ್ರಿ ಗ್ರಾಪಂ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ, ಹಟ್ಟಿಯಂಗಡಿ ಗ್ರಾಪಂ. ಅಧ್ಯಕ್ಷ ರಾಜೀವ ಶೆಟ್ಟಿ, ಸಂತೋಷ್ ಮುಂತಾದವರು ಇದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ತಲ್ಲೂರಿನಲ್ಲಿ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಡಿಎಸ್ಪಿ ಎಂ.ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್, ಪಿಎಸ್ಸೈ ನಾಸಿರ್ ಹಸೈನ್, ಗಂಗೊಳ್ಳಿ ಪಿಎಸ್ಸೈ ಸುಬ್ಬಣ್ಣ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದರು.