ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬದುಕಿನ ಮಾನಸಿಕ ಒತ್ತಡಕ್ಕೆ ಸಂಗೀತ ಔಷಧವಿದ್ದಂತೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಂಗೀತ ಅಭ್ಯಾಸ ಮಾಡಿಸುವುದರಿಂದ ಉತ್ತಮ ಹಾಡುಗಾರರನ್ನಾಗಿ ಮಾಡಲು ಸಾಧ್ಯ. ಸಂಗೀತ ಸ್ಪರ್ಧೆಯ ಆಯೋಜನೆಯಿಂದ ಹೊಸ ಪ್ರತಿಭೆಗಳು ಮುಖ್ಯವಾಹಿನಿಗೆ ಬರಲು ಸಹಕಾರಿ ಎಂದು ಸಂಗೀತಗಾರ, ಉಪನ್ಯಾಸಕ ರವಿ ಕಾರಂತ ಅವರು ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ಯು ಚಾನೆಲ್ ಸಾದರಪಡಿಸಿದ ರಾಜ್ಯೋತ್ಸವ ಅಂಗವಾಗಿ ಕರಾವಳಿ ಕರ್ನಾಟಕ ಕನ್ನಡ ಕರವೊಕೆ ಗೀತಗಾಯನ ಸ್ಪರ್ಧೆ ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಂಸ್ಕೃತಿಕ ಚಿಂತಕ ವೆಂಕಟೇಶ್ ಭಟ್, ಯು ಚಾನೆಲ್ ಸಂಚಾಲಕ ಪ್ರಸಾದ್ ರಾವ್, ಹಾಡುಗಾರರಾದ ಮಾಲಿನಿ ರಮೇಶ್, ಸುರೇಶ್ ಕಾರ್ಕಡ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿದರು.