ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ “ಸಾಮಾಜಿಕ ಸಮಸ್ಯೆ”ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಅಭಿಮಾನಿ ಪ್ರಶಸ್ತಿ” ಮೈಸೂರಿನ “ಮೈಸೂರು ದಿಗಂತ” ಪತ್ರಿಕಾ ಸಂಸ್ಥೆಯು “ಮಾನವೀಯ ಸಮಸ್ಯೆ” ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ“, ಬೆಂಗಳೂರಿನ ಅಭಿಮನ್ಯು ಪತ್ರಿಕಾ ಸಂಸ್ಥೆಯು “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ ಅಭಿಮನ್ಯು ಪ್ರಶಸ್ತಿ, ಬೆಂಗಳೂರಿನ “ಪ್ರಜಾ ಸಂದೇಶ” ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮ ಕಾರಿಯಾಗಿ ಬಿಂಬಿಸುವ ಲೇಖನಕ್ಕೆ ” ಪ್ರಜಾ ಸಂದೇಶ ದತ್ತಿ ಪ್ರಶಸ್ತಿ “ ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಸಂಸ್ಥೆಗಳು ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ.
2023 ನೇ ಸಾಲಿನ ಪ್ರಶಸ್ತಿಗಳು:
2023 ಜನವರಿ ಯಿಂದ ಡಿಸೆಂಬರ್-2023 ರವರೆಗೆ, ಪ್ರಕಟವಾಗಿರುವ “ಸಾಮಾಜಿಕ ಸಮಸ್ಯೆ” ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಅಭಿಮಾನಿ ಪ್ರಶಸ್ತಿ-2023”, “ಮಾನವೀಯ ಸಮಸ್ಯೆ”ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ-2023” ಶೋಷಣೆಯನ್ನು ಪರಿಣಾಮ ಕಾರಿಯಾಗಿ ಬಿಂಬಿಸುವ ಲೇಖನಕ್ಕೆ “ ಪ್ರಜಾ ಸಂದೇಶ ಪ್ರಶಸ್ತಿ-2023” ಹಾಗೂ “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ “ಅಭಿಮನ್ಯು ದತ್ತಿ ಪ್ರಶಸ್ತಿ -2023” ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
2024 ನೇ ಸಾಲಿನ ಪ್ರಶಸ್ತಿಗಳು :
2024 ಜನವರಿ ಯಿಂದ ಸೆಪ್ಟೆಂಬರ್ 2024 ರವರೆಗೆ ಪ್ರಕಟವಾಗಿರುವ “ಸಾಮಾಜಿಕ ಸಮಸ್ಯೆ” ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಅಭಿಮಾನಿ ಪ್ರಶಸ್ತಿ-2024”, “ಮಾನವೀಯ ಸಮಸ್ಯೆ”ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ-2024” ಶೋಷಣೆಯನ್ನು ಪರಿಣಾಮ ಕಾರಿಯಾಗಿ ಬಿಂಬಿಸುವ ಲೇಖನಕ್ಕೆ “ ಪ್ರಜಾ ಸಂದೇಶ ಪ್ರಶಸ್ತಿ-2024 ಹಾಗೂ “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿಯಾದ ವರದಿಗೆ “ಅಭಿಮನ್ಯು ಪ್ರಶಸ್ತಿ -2024 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ–ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರ್ತಕರ್ತರು ಹೆಸರು (ಬೈಲೈನ್) ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕ ರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ-ವರದಿಗಳನ್ನು ಇದೇ ದಿನಾಂಕ : 20/11/2024ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ “ಅಭಿಮಾನಿ ಪ್ರಶಸ್ತಿ-2023”, “ಅಭಿಮಾನಿ ಪ್ರಶಸ್ತಿ-2024” ಹಾಗೂ “ಮೈಸೂರು ದಿಗಂತ ಪ್ರಶಸ್ತಿ-2023” “ಮೈಸೂರು ದಿಗಂತ ಪ್ರಶಸ್ತಿ-2024” “ಪ್ರಜಾ ಸಂದೇಶ ಪ್ರಶಸ್ತಿ-2023”, “ಪ್ರಜಾ ಸಂದೇಶ ಪ್ರಶಸ್ತಿ-2024” ಹಾಗೂ “ಅಭಿಮನ್ಯು ಪ್ರಶಸ್ತಿ -2023”, “ಅಭಿಮನ್ಯು ಪ್ರಶಸ್ತಿ-2024” ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560001.
ಅವರಿಗೆ ಕಳುಹಿಸಲು ಅಥವಾ kmaprashast@gmail.com ಗೆ ಇ – ಮೇಲ್ ಮೂಲಕ ಕಳುಹಿಸಲು ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.