ಕುಂದಾಪುರ: ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಬೆಳಗಿನ ಜಾವ ನಡೆಯಿತು. ಭಕ್ತರು ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಿದ ಸಾವಿರಾರು ಹಣತೆಗಳನ್ನು ಬೆಳಗಿರುವುದು ನೋಡುಗರ ಕಣ್ಣಿಗೆ ಮುದ ನೀಡಿದವು. ನೂರಾರು ಭಕ್ತರು ಶ್ರೀದೇವರ ವಿಶ್ವರೂಪ ದರ್ಶನ ಪಡೆದು ಕೃತಾರ್ಥರಾದರು. ದೇವಳದ ಸುತ್ತ ರಚಿಸಲಾದ ರಂಗೋಲಿಗಳ ಮಧ್ಯೆ ಬೆಳಗುತ್ತಿದ್ದ ಹಣತೆಗಳ ನೋಡುಗರ ಕಣ್ಣಿಗೆ ಮುದ ನೀಡಿದವು. ಸಾವಿರಾರು ಹಣತೆಗಳನ್ನು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಮುಂಜಾನೆಯಿಂದಲೇ ಮಕ್ಕಳು, ವೃದ್ಧರು, ಹೆಂಗಳೆಯರು ಸೇರಿದಂತೆ ಊರ ಪರಊರಿನಿಂದ ಭಗವದ್ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ವಿಶ್ವರೂಪ ದರ್ಶನ ಪಡೆದರು. ಶ್ರೀದೇವರನ್ನು ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಬೆಳಿಗ್ಗೆ 3:30ರಿಂದ ಭಜನೆ, ಸುಪ್ರಭಾತ ಸೇವೆ, ಕಾಕಾಡಾರತಿ, ಜಾಗರ ಪೂಜೆ ನಡೆಯಿತು.
ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಬೆಳಗಿನ ಜಾವ ನಡೆಯಿತು. ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಜೋಡಿಸಲಾದ ಹಣತೆಗಳನ್ನು ಬೆಳಗಿದ ಭಕ್ತರು ಕೃತಾರ್ಥರಾದರು. ದೇವಳದ ಮುಂಭಾಗದಲ್ಲಿ ಬೃಹತ್ ಗಾತ್ರದ ದೀಪ ಹಾಗೂ ದೇವಳದ ಸುತ್ತ ರಚಿಸಲಾದ ರಂಗೋಲಿಗಳ ಮಧ್ಯೆ ಬೆಳಗುತ್ತಿದ್ದ ಹಣತೆಗಳ ನೋಡುಗರ ಕಣ್ಣಿಗೆ ಮುದ ನೀಡಿದವು. ದೇವಳದ ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿ ಸದಸ್ಯರು, ಸೇವಾದಾರರು, ಊರಿನ ಹತ್ತು ಸಮಸ್ತರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.