ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ಆಶ್ರಯದಲ್ಲಿ ಶೈಕ್ಷಣಿಕ ವರ್ಷ 2024-25ನೇ ಸಾಲಿನ ಚಟುವಟಿಕೆ “ಎಮಿನೆನ್ಸ್ 24” ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದರಾದ ಡಾ.ಶುಭಕರಾಚಾರಿ ಅವರು ನೆರವೇರಿಸಿದರು.
ಮಂಗಳೂರಿನ ವಿಸ್ಡಮ್ ಸಂಸ್ಥೆಯ ಅಭಿಲಾಷ್ ಕ್ಷತ್ರೀಯ ಉಪನ್ಯಾಸ ನೀಡಿದರು. “ಕೆರಿಯರ್ ಅಡ್ವಾನ್ಸ್ಮೆಂಟ್ ಇನ್ ಬಿಬಿಎ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ವಿಭಾಗದ ಅರ್ಚನಾ ಅರವಿಂದ ಉಪಸ್ಥಿತರಿದ್ದರು.