ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ವೆಂಕಟರಾಮ್ ಭಟ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ವಾಣಿಜ್ಯ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ, ಪಿಜಿಡಿಎಚ್‌ಆರ್‌ಎಂ ಮತ್ತು ಪಿಜಿಡಿಎಸ್‌ಬಿಎಸ್‌ಎ ಪದವಿಗಳಳನ್ನು ಪಡೆದಿದ್ದಾರೆ. ಅವರು ಉತ್ತಮ ಆಡಳಿತಗಾರರಾಗಿ, ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಮತ್ತು ತರಬೇತುದಾರರಾಗಿಯೂ ಹೆಸರುವಾಸಿಯಾಗಿದ್ದಾರೆ.
ನೂತನ ಪ್ರಾಂಶುಪಾಲರನ್ನು ಸಹೋದ್ಯೋಗಿಗಳಾದ ಗಂಗಾರಾಜು, ಶೇಖರ್ ಬಿ., ಶ್ರೀಕಾಂತ್, ರಾಜೇಂದ್ರ, ಸಂದೇಶ್ ಶೆಟ್ಟಿ, ಶೈಲಜಾ, ವಿನಯ್ ಅವರುಗಳು ಗೌರವಿಸಿದರು.