ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಂದುಶ್ರೀ ಮಹಿಳಾ ಸಂಘ ಗಂಗೊಳ್ಳಿ, ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಇವರ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪುಣ್ಯಸ್ಮರಣೆ -ನುಡಿ ನಮನ ಕಾರ್ಯಕ್ರಮ ಗಂಗೊಳ್ಳಿಯ ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ಪೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಅವರು ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ದೀನ ದಲಿತರಿಗೆ ಅದರಲ್ಲೂ ಶಿಕ್ಷಣಕ್ಕೆ ಒತ್ತು ನೀಡಿ ಕಾರ್ಯಕ್ರಮ ರೂಪಿಸಿದ್ದರು. ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಅನೇಕ ಕಾರ್ಯಕ್ರಮಗಳನ್ನು ನೀಡಿ ವಿಶ್ವವೇ ಧರ್ಮಸ್ಥಳವನ್ನು ನೋಡುವಂತೆ ಮಾಡಿದ್ದರು ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗಂಗೊಳ್ಳಿ ಬಿ ಒಕ್ಕೂಟದ ಮಾಜಿ ಅಧ್ಯಕ್ಷೆ ಸುಮಿತ್ರಾ ಜಿ. ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫೆರ್ನಾಂಡಿಸ್, ರೇಖಾ ಖಾರ್ವಿ, ನಿಖಿತಾ, ಕಮಲ, ಶೇಷಮ್ಮ, ಶೋಭಾ, ಸಹನಾ, ಸಂಗೀತಾ, ಮಹಿಳಾ ಸಂಘದ ಸರೋಜ ಜಿ.ಟಿ., ಕುಸುಮ, ಶಕುಂತಲಾ, ಸುಶೀಲ, ಶಿವಾನಂದ ಜಿ.ಟಿ., ಜಿ.ಈಶ್ವರ, ಶ್ರೀಕಾಂತ ಎನ್. ಮತ್ತಿತರರು ಉಪಸ್ಥಿತರಿದ್ದರು.
ರೇಖಾ ಖಾರ್ವಿ ಸ್ವಾಗತಿಸಿದರು. ಸುಮಿತ್ರಾ ಕಾರ್ಯಕ್ರಮ ನಿರ್ವಹಿಸಿದರು. ನಿಖಿತಾ ವಂದಿಸಿದರು.