ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭತ್ತದ ಹುಲ್ಲು ಜೋಡಿಸುವ ಯಂತ್ರ ಚಿತ್ತೂರು ಪೆಟ್ರೋಲ್ ಬಂಕ್ ಸಮೀಪ ಮಗುಚಿದ ಪರಿಣಾಮ ಚಾಲಕ ಮಂಜುನಾಥ್ (37) ಸಾವನ್ನಪ್ಪಿದ್ದಾರೆ.
ಅವರು ಕೆರಾಡಿಯಿಂದ ಚಿತ್ತೂರು ಕಡೆಗೆ ಬರುತ್ತಿದ್ದ ವೇಳೆ ಹತೋಟಿ ತಪ್ಪಿ ರಸ್ತೆ ಬದಿಯ ತಗ್ಗು ಜಾಗಕ್ಕೆ ಯಂತ್ರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.