ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಘಟಿತ ಸಮಾಜ ಮನಸ್ಸು ಮಾಡಿದರೆ ಎನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಬಿಜೂರು ನಂದಿಕೇಶ್ವರ ದೇವಳದ ಸಭಾಭವನ ನಿರ್ಮಾಣ ಸಾಕ್ಷಿಯಾಗಿದೆ, ಸಂಘಟಿತ ದುಡಿಮೆಯಿಂದ ನಿರ್ಮಾಣಗೊಂಡ ಈ ಸಭಾಭವನವು ಭಕ್ತರ ಭಕ್ತಿಯ ಪ್ರತೀಕವಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬಿಜೂರು ಮೂರ್ಗೊಳಿಹಕ್ಕು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಭಕ್ತರ ಸೇವಾ ಸಂಕಲ್ಪದಂತೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ನಂದಿಕೇಶ್ವರ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ನಂದಿಕೇಶ್ವರ ದೈವಸ್ಥಾನದ ಅಧ್ಯಕ್ಷ ಶ್ರೀನಿವಾಸ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೊರು, ಸಮೃದ್ಧ ಬೈಂದೂರು ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ, ಬಿಜೂರು ಗ್ರಾ.ಪಂ.ಅಧ್ಯಕ್ಷೆ ಚಣ್ಣಮ್ಮ, ಉದ್ಯಮಿಗಳಾದ ಲಕ್ಷ್ಮಣ ದೇವಾಡಿಗ ಕಿರಿನಮನೆ, ರಾಘವೇಂದ್ರ ಶ್ಯಾನುಭಾಗ್ ಬಿಜೂರು, ಬಿಜೂರು ಕಾತ್ಯಾಯಿನಿ ರೈಸ್‌ಮಿಲ್ ಮಾಲಕ ಸಂತೋಷ್ ಶ್ಯಾನುಬಾಗ್, ಸವಿತಾ ದಿನೇಶ ಗಾಣಿಗ, ಉಪ್ಪುಂದ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮಾನ್ವೇಜಿಂಗ್ – ಡೈರೆಕ್ಟರ್ ಡಾ. ಗೋವಿಂದಬಾಬು ಪೂಜಾರಿ, ಶಾಲೆಬಾಗಿಲು ಶ್ರೀರಾಮ್ ಹೊಟೇಲ್ ಮತ್ತು ಶ್ರೀರಾಮ್ ಬೇಕರಿ ಮಾಲಕ ಅಣ್ಣಪ್ಪ ದೇವಾಡಿಗ, ಪಡುವರಿ ಸರಸ್ವತಿ ವಿ. ಶೇರುಗಾರ್, ನಾಯ್ಕನಕಟ್ಟೆ ರಾಧಾಕೃಷ್ಣ ಕಲಾಮಂದಿರದ ಮಾಲಕ ಚಂದ್ರ ಎನ್. ದೇವಾಡಿಗ, ಅಣ್ಣಪ್ಪ ದೇವಾಡಿಗ ಹುಟ್ಟಿನ ಮನೆ ಬೈಂದೂರು, ಉದ್ಯಮಿ ಗುರುರಾಜ್ ಪಂಜು ಪೂಜಾರಿ ಬಿಜೂರು, ಬೈಂದೂರು ಶ್ರೀ ದುರ್ಗಾ ಅರ್ಥಮೂವರ್ಸ್ ಮಾಲಕ ವೆಂಕಟರಮಣ ಶೇರುಗಾರ್, ಉದ್ಯಮಿ ಭಾಸ್ಕರ್ ಮೊಗವೀರ – ದಾಸೋಡಿ, ಉದ್ಯಮಿ ಸತೀಶ್ ಕೊಠಾರಿ ನಾಯ್ಕನಕಟ್ಟೆ – ಕರುನಾಡ ಸಿರಿ ಮುಂಬಯಿ ಅಧ್ಯಕ್ಷ ಬಾಲಚಂದ್ರ ದೇವಾಡಿಗ, ದೈವಸ್ಥಾನದ ಉಪಾಧ್ಯಕ್ಷ ಸುರೇಶ ದೇವಾಡಿಗ ಬೆಟ್ಟಿನಮನೆ, ಉಡುಪಿ ಚೆನ್ನಪ್ಪ ಮೊಲಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸಭಾಭವನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ ದಾನಿಗಳನ್ನು ಹಾಗೂ ಸೇವಾ ರೂಪದಲ್ಲಿ ಶ್ರಮದಾನ ಮಾಡಿದ ಶ್ರಮಿಕರನ್ನು ಗೌರವಿಸಲಾಯಿತು.
ಸಮಿತಿಯ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಕೃಷ್ಣ ಬಿಜೂರು ಸ್ವಾಗತಿಸಿದರು, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿ, ನಾರಾಯಣ ದೇವಾಡಿಗ ವಂದಿಸಿದರು.